ರೋಹಿತ್ ಶರ್ಮಾಗೆ ವಿದಾಯ ಹೇಳಿದ ಮುಂಬೈ ಪ್ರೇಕ್ಷಕರು

Krishnaveni K

ಶನಿವಾರ, 18 ಮೇ 2024 (13:16 IST)
ಮುಂಬೈ: ಐಪಿಎಲ್ 2024 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಕೊನೆಯ ಲೀಗ್ ಪಂದ್ಯದಲ್ಲಿ ಮುಂಬೈ ಪ್ರೇಕ್ಷಕರು ತವರಿನ ಸ್ಟಾರ್ ರೋಹಿತ್ ಶರ್ಮಾಗೆ ವಿದಾಯ ಹೇಳಿದ್ದಾರೆ.

ರೋಹಿತ್ ಶರ್ಮಾರನ್ನು ಈ ಬಾರಿ ಮುಂಬೈ ಇಂಡಿಯನ್ಸ್ ನಾಯಕತ್ವದಿಂದ ಕಿತ್ತು ಹಾಕಿ ಹಾರ್ದಿಕ್ ಪಾಂಡ್ಯಗೆ ಪಟ್ಟ ಕಟ್ಟಲಾಗಿತ್ತು. ಆದರೆ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ತಂಡ ಹೀನಾಯ ಸೋಲು ಅನುಭವಿಸಿದೆ. ಜೊತೆಗೆ ತಂಡದೊಳಗೇ ರೋಹಿತ್ ಮತ್ತು ಹಾರ್ದಿಕ್ ಬಣದ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿಯಿದೆ.

ಈ ನಡುವೆ ರೋಹಿತ್ ಮುಂದಿನ ವರ್ಷ ಮುಂಬೈ ಇಂಡಿಯನ್ಸ್ ತೊರೆದು ಬೇರೆ ತಂಡ ಕೂಡಿಕೊಳ್ಳುವ ಸಾಧ‍್ಯತೆ ದಟ್ಟವಾಗಿದೆ. ಹೀಗಾಗಿ ಪ್ರೇಕ್ಷಕರು ನಿನ್ನೆಯ ರೋಹಿತ್ ಶರ್ಮಾ ಇನಿಂಗ್ಸ್ ಬಳಿಕ ಭಾವುಕರಾದರು. ನಿನ್ನೆಯ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ರೋಹಿತ್ ಶರ್ಮಾ ಪೆವಿಲಿಯನ್ ಗೆ ಮರಳುವಾಗ ಪ್ರೇಕ್ಷಕರು ಎದ್ದು ನಿಂತು ಗೌರವ ಸಲ್ಲಿಸಿದ್ದಾರೆ.

ಅಷ್ಟೇ ಅಲ್ಲದೆ, ಸೋಷಿಯಲ್ ಮೀಡಿಯಾ ಮೂಲಕ ರೋಹಿತ್ ಶರ್ಮಾಗೆ ನೆಟ್ಟಿಗರು ವಿದಾಯ ಹೇಳಿದ್ದಾರೆ. ಬಹುಶಃ ಮುಂಬೈ ಜೆರ್ಸಿಯಲ್ಲಿ ರೋಹಿತ್ ರನ್ನು ಇದು ಕೊನೆಯ ಬಾರಿಗೆ ನೋಡುತ್ತಿರಬಹುದು ಎಂದು ಭಾವುಕರಾಗಿ ಸಂದೇಶ ಬರೆದಿದ್ದಾರೆ. ಅಲ್ಲದೆ, ನಾಯಕರಾಗಿ ಮುಂಬೈಗೆ ಯಶಸ್ಸು ತಂದುಕೊಟ್ಟಿರುವುದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ