ಮುಂಬೈ ಇಂಡಿಯನ್ಸ್ ತವರಿನಲ್ಲಿ ಆಡುವುದಕ್ಕೆ ಇತರ ಫ್ರಾಂಚೈಸಿಗಳ ಆಕ್ಷೇಪ

ಶುಕ್ರವಾರ, 25 ಫೆಬ್ರವರಿ 2022 (11:47 IST)
ಮುಂಬೈ: ಐಪಿಎಲ್ 2022 ರ ಪಂದ್ಯಾವಳಿಗಳು ನಡೆಯುವ ಸ್ಥಳಗಳನ್ನು ಬಿಸಿಸಿಐ ಈಗಾಗಲೇ ಘೋಷಣೆ ಮಾಡಿದೆ. ಅವುಗಳಲ್ಲಿ ಮುಂಬೈನ ವಾಂಖೆಡೆ ಮೈದಾನವೂ ಒಂದು.

ಆದರೆ ಈ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ಆಡಬಾರದು ಎಂದು ಇತರ ಫ್ರಾಂಚೈಸಿಗಳು ಆಕ್ಷೇಪಿಸಿವೆ. ಯಾವುದೇ ತಂಡಕ್ಕೂ ತವರಿನ ಲಾಭ ಸಿಗಬಾರದು ಎಂಬುದು ಇತರ ಫ್ರಾಂಚೈಸಿಗಳ ತಕರಾರಿಗೆ ಕಾರಣ.

ಎಲ್ಲಾ ತಂಡಗಳೂ ತಟಸ್ಥ ಸ್ಥಳದಲ್ಲಿ ಪಂದ್ಯವಾಡಬೇಕು. ಹೀಗಾಗಿ ಈ ನಿಯಮ ಮುಂಬೈ ಇಂಡಿಯನ್ಸ್ ಗೂ ಅನ್ವಯವಾಗಬೇಕು ಎಂದು ಫ್ರಾಂಚೈಸಿಗಳ ವಾದ. ಹೀಗಾಗಿ ಬಿಸಿಸಿಐ ಈಗ ವೇಳಾಪಟ್ಟಿ ತಯಾರಿಸುವಾಗ ಈ ವಿಚಾರದ ಬಗ್ಗೆ ಗಮನ ಹರಿಸಬೇಕಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ