ಶ್ರೀಲಂಕಾ ಮಾಜಿ ಸ್ಟಾರ್ ಸ್ಪಿನ್ನರ್ ಮುರಳೀಧರನ್ ಸರಣಿಯಲ್ಲಿ ಆಸ್ಟ್ರೇಲಿಯಾ ಬೌಲಿಂಗ್ ಸಲಹೆಗಾರರಾಗಿ ಮುಂದುವರಿಕೆಯು ಪಲ್ಲೆಕೆಲೆಯಲ್ಲಿ ಮೊದಲ ಟೆಸ್ಟ್‌ಗೆ ಮುನ್ನವೇ ಕೊನೆಗೊಂಡಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ. ಆಸ್ಟ್ರೇಲಿಯಾ-ಶ್ರೀಲಂಕಾ ಸರಣಿ ಆರಂಭದಲ್ಲೇ ವಿವಾದದ ಸುಳಿಗೆ ಸಿಕ್ಕಿ, ಮುತ್ತಯ ಮುರಳೀಧರನ್ ಆಸೀಸ್ ಕ್ರಿಕೆಟರುಗಳಿಗೆ ನೆರವಾಗುತ್ತಿರುವುದಕ್ಕೆ ಶ್ರೀಲಂಕಾ ಕ್ರಿಕೆಟ್ ಮುಖ್ಯಸ್ಥರಿಗೆ ಸಿಟ್ಟು ತರಿಸಿತ್ತು.
ಮುರಳಿಧರನ್ ಸರ್ವಕಾಲಿಕ ಅತಿ ಹೆಚ್ಚು ವಿಕೆಟ್ ಪಡೆದವರಾಗಿದ್ದು, 133 ಟೆಸ್ಟ್ ಪಂದ್ಯಗಳಲ್ಲಿ 800 ವಿಕೆಟ್ ಕಬಳಿಸಿದ್ದಾರೆ.ಶ್ರೀಲಂಕಾ ಕ್ರಿಕೆಟ್ ಅಧ್ಯಕ್ಷ ತಿಲಂತಾ ಸುಮತಿಪಾಲಾ ಅವರು ಕೊಲಂಬೊದಲ್ಲಿ ಅನುಮತಿಯಿಲ್ಲದೇ ಅಭ್ಯಾಸದ ಪಿಚ್ ಬಳಸುವುದಕ್ಕೆ ಮುರಳೀಧರನ್ ನೆರವಾಗಿದ್ದಾರೆಂದು ಆರೋಪಿಸಿದ್ದರು.