ನಾಗ್ಪುರ ಟೆಸ್ಟ್: ಕೊಹ್ಲಿ-ಪೂಜಾರ ಬ್ಯಾಂಡ್ ಬಜಾಯಿಸ್ತಿದ್ರೆ ಲಂಕಾ ಸುಸ್ತೋ ಸುಸ್ತು

ಭಾನುವಾರ, 26 ನವೆಂಬರ್ 2017 (11:40 IST)
ನಾಗ್ಪುರ: ಶ್ರೀಲಂಕಾ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ ಪೂಜಾರ ಆಕರ್ಷಕ ಶತಕ ಬಾರಿಸಿದ್ದಾರೆ. ಇಬ್ಬರ ಆಟಕ್ಕೆ ಲಂಕಾ ಸುಸ್ತಾಗಿ ಕುಳಿತಿದೆ.
 

ಇವರ ಭರ್ಜರಿ ಆಟಕ್ಕೆ ಟೀಂ ಇಂಡಿಯಾ ಊಟದ ವಿರಾಮಕ್ಕೆ ಮೊದಲು 3 ವಿಕೆಟ್ ನಷ್ಟಕ್ಕೆ 404 ರನ್ ಗಳಿಸಿದೆ. ಇದರೊಂದಿಗೆ 199 ರನ್ ಗಳ ಲೀಡ್ ಸಿಕ್ಕಿದೆ. ಹಾಗಿದ್ದರೂ ಊಟಕ್ಕೆ ಮೊದಲು 143 ರನ್ ಗಳಿಸಿದ್ದ ಚೇತೇಶ್ವರ ಪೂಜಾರ ವಿಕೆಟ್ ಪಡೆಯಲು ಲಂಕಾ ಯಶಸ್ವಿಯಾಗಿದೆ. ಈ ವಿಕೆಟ್ ಶನಕ ಪಾಲಾಯಿತು. ಇದಕ್ಕೂ ಮೊದಲು ಕೊಹ್ಲಿ ಜತೆ ಎದುರಾಳಿಗಳ ಬೆವರು ಇಳಿಸಿದ ಪೂಜಾರ ಬರೋಬ್ಬರಿ 362 ಬಾಲ್ ಎದುರಿಸಿ 14 ಬೌಂಡರಿ ಗಳಿಸಿದರು.

ಹಾಗಿದ್ದರೂ ಕೊಹ್ಲಿ ಕ್ರೀಸ್ ನಲ್ಲಿರುವುದು ಲಂಕಾದ ಎದೆ ನಡುಕ ಹೆಚ್ಚಿಸಿದೆ. ಕೊಹ್ಲಿ ಟೆಸ್ಟ್ ಬಾಳ್ವೆಯ 19 ನೇ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ನ 51 ನೇ ಶತಕ ಸಿಡಿಸಿದರು. ಕಳೆದ ಪಂದ್ಯದಲ್ಲಿ ಭಾರತದ ಹುಟ್ಟಡಗಿಸಿದ್ದ ಸುರಂಗಾ ಲಕ್ಮಲ್ ಗೆ ಈ ಪಂದ್ಯದಲ್ಲಿ ಹೆಚ್ಚು ಯಶಸ್ಸು ದೊರಕಲಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ