ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೇರಿದ ನ್ಯೂಜಿಲೆಂಡ್
ಬುಧವಾರ, 3 ಫೆಬ್ರವರಿ 2021 (09:15 IST)
ದುಬೈ: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲ್ ಗೇರಿದ ಮೊದಲ ತಂಡವಾಗಿ ನ್ಯೂಜಿಲೆಂಡ್ ಹೆಗ್ಗಳಿಕೆಗೆ ಪಾತ್ರವಾಗಿದೆ. ಆಸ್ಟ್ರೇಲಿಯಾ ದ.ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿ ಮುಂದೂಡಿದ ಬೆನ್ನಲ್ಲೇ ನ್ಯೂಜಿಲೆಂಡ್ ಫೈನಲ್ ಗೇರಿದೆ.
ಇದೀಗ ಫೈನಲ್ ಗೇರುವ ಇನ್ನೊಂದು ತಂಡ ಯಾವುದು ಎಂಬುದು ಕತೂಹಲಕಾರಿಯಾಗಿದೆ. ಉಳಿದೊಂದು ಸ್ಥಾನಕ್ಕಾಗಿ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಪೈಪೋಟಿ ನಡೆಸಲಿದೆ. ಒಂದು ಭಾರತ ಶುಕ್ರವಾರದಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಗೆದ್ದರೆ ಆ ಸ್ಥಾನ ಭಾರತದ ಪಾಲಾಗಲಿದೆ. ಹೀಗಾಗಿ ಈ ಸರಣಿಯ ಫಲಿತಾಂಶ ಭಾರತ-ಇಂಗ್ಲೆಂಡ್ ಮಾತ್ರವಲ್ಲದೆ, ಆಸ್ಟ್ರೇಲಿಯಾಕ್ಕೂ ಮುಖ್ಯವಾಗಲಿದೆ.