ತವರಿನಲ್ಲಿ ಟೆಸ್ಟ್ ಆಡುವ ಅವಕಾಶ ಸಿಗದ ಬೇಸರ ಹೊರಹಾಕಿದ ವೇಗಿ ಟಿ ನಟರಾಜನ್

ಮಂಗಳವಾರ, 2 ಫೆಬ್ರವರಿ 2021 (11:41 IST)
ಚೆನ್ನೈ: ಇಂಗ್ಲೆಂಡ್ ವಿರುದ್ಧ ತವರು ಚೆನ್ನೈನಲ್ಲಿ ನಡೆಯಲಿರುವ ಎರಡು ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾ ಪ್ರತಿನಿಧಿಸುವ ಅವಕಾಶ ಸಿಗದಿರುವುದಕ್ಕೆ ವೇಗಿ ಟಿ ನಟರಾಜನ್ ಬೇಸರ ಹೊರಹಾಕಿದ್ದಾರೆ.

 

ಆಸ್ಟ್ರೇಲಿಯಾ ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ನಟರಾಜನ್ ಗೆ ತವರಿನ ಪಂದ್ಯದಲ್ಲಿ ಅವಕಾಶ ಸಿಕ್ಕಿಲ್ಲ. ಕಳೆದ ಕೆಲವು ಪಂದ್ಯಗಳಲ್ಲಿ ಉತ್ತಮವಾಗಿ ಆಡಿ ಈಗ ಅವಕಾಶ ಸಿಗದೇ ಇದ್ದಾಗ ಸಹಜವಾಗಿಯೇ ಬೇಸರವಾಗುತ್ತದೆ. ಆದರೆ ಕೆಲವೊಮ್ಮೆ ಬ್ರೇಕ್ ತೆಗೆದುಕೊಳ್ಳುವುದೂ ಉತ್ತಮ ಅರ್ಥಮಾಡಿಕೊಳ್ಳುವೆ. ಆದರೂ ನನ್ನ ತವರು ಚೆನ್ನೈನಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಗುತ್ತಿಲ್ಲ ಎಂಬ ಬೇಸರವಿದೆ ಎಂದು ನಟರಾಜನ್ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ