ಏಕದಿನ ವಿಶ್ವಕಪ್: ಇಂದು ಪಾಕಿಸ್ತಾನ-ನೆದರ್ಲ್ಯಾಂಡ್ಸ್ ನಡುವೆ ಪಂದ್ಯ

ಶುಕ್ರವಾರ, 6 ಅಕ್ಟೋಬರ್ 2023 (09:00 IST)
ಹೈದರಾಬಾದ್: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಕೂಟದಲ್ಲಿ ಇಂದು ಪಾಕಿಸ್ತಾನ-ನೆದರ್ಲ್ಯಾಂಡ್ಸ್ ನಡುವೆ ಇಂದು ಹೈದರಾಬಾದ್ ನಲ್ಲಿ ಎರಡನೇ ಪಂದ್ಯ ನಡೆಯಲಿದೆ.

ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ಈಗಾಗಲೇ ಅಭ್ಯಾಸ ಪಂದ್ಯದಲ್ಲಿ ಸೋತು ಸುಣ್ಣವಾಗಿದೆ. ಪ್ರಮುಖ ಆಟಗಾರರು ನಿರೀಕ್ಷೆ ತಕ್ಕ ಪ್ರದರ್ಶನ ನೀಡದೇ ಇರುವುದು ಪಾಕ್ ಗೆ ಹಿನ್ನಡೆಯಾಗಿದೆ.

ಆದರೆ ನೆದರ್ಲ್ಯಾಂಡ್ಸ್ ಕೊಂಚ ದುರ್ಬಲ ತಂಡವಾಗಿರುವುದರಿಂದ ಪಾಕ್ ಗೆ ಗೆಲುವಿನ ಹಳಿಗೆ ಮರಳಲು ಅವಕಾಶ ಸಿಕ್ಕಂತಾಗಲಿದೆ. ನೆದರ್ಲ್ಯಾಂಡ್ಸ್ ಕೂಡಾ ತೀರಾ ದುರ್ಬಲ ತಂಡವೇನೂ ಅಲ್ಲ. ಹೀಗಾಗಿ ಕೊಂಚ ಮಟ್ಟಿಗೆ ಪ್ರತಿರೋಧ ನಿರೀಕ್ಷಿಸಬಹುದು. ಈ ಪಂದ್ಯ ಅಪರಾಹ್ನ 2 ಗಂಟೆಗೆ ಆರಂಭವಾಗುವುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ