ವೈಟ್‌ವಾಶ್ ಭೀತಿಯಲ್ಲಿ ಪಾಕಿಸ್ತಾನ: 5ನೇ ಏಕದಿನದಲ್ಲಿ ಇಂಗ್ಲೆಂಡ್ 45 ಓವರುಗಳಲ್ಲಿ 275

ಭಾನುವಾರ, 4 ಸೆಪ್ಟಂಬರ್ 2016 (18:27 IST)
ಇಂಗ್ಲೆಂಡ್ ವಿರುದ್ಧ ನಾಲ್ಕು ಏಕ ದಿನ ಪಂದ್ಯಗಳಲ್ಲಿ ಸೋತಿರುವ ಪಾಕಿಸ್ತಾನ ಐದನೇ ಪಂದ್ಯದಲ್ಲಿ ಗೆದ್ದು ವೈಟ್‌ವಾಶ್ ಆಗುವುದನ್ನು ತಪ್ಪಿಸಿಕೊಳ್ಳಲು ಶತಪ್ರಯತ್ನ ನಡೆಸಿದೆ. ಕಾರ್ಡಿಫ್ ಸೋಫಿಯಾ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆದ ಐದನೇ ಪಂದ್ಯದಲ್ಲಿ ಇಂಗ್ಲೆಂಡ್ ಬೃಹತ್ ಸ್ಕೋರಿನತ್ತ ದಾಪುಗಾಲು ಹಾಕುತ್ತಿದ್ದು, 45 ಓವರುಗಳಲ್ಲಿ 275 ರನ್ ದಾಖಲಿಸಿದೆ.

ಪಾಕಿಸ್ತಾನ ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ವಿರುದ್ಧ 2-2ರಿಂದ ಸಮಮಾಡಿಕೊಂಡು ಐಸಿಸಿ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿ ಉಳಿದಿದ್ದರೂ ಏಕ ದಿನದ ನಾಲ್ಕು ಪಂದ್ಯಗಳನ್ನು ಸೋಲುವ ಮೂಲಕ ಏಕದಿನ ಮಾದರಿಯಲ್ಲಿ ತನ್ನ ದೌರ್ಬಲ್ಯವನ್ನು ಜಗಜ್ಜಾಹೀರು ಮಾಡಿದೆ. ಇದರಿಂದ ಏಕದಿನದಲ್ಲಿ ಐಸಿಸಿ ಶ್ರೇಯಾಂಕದಲ್ಲಿ ಪಾಕ್ ತೀರಾ ಕೆಳಮಟ್ಟಕ್ಕೆ ಕುಸಿದಿದೆ.

ಜಾಸನ್ ರಾಯ್ ಅವರ 87 ಮತ್ತು ಬೆನ್ ಸ್ಟೋಕ್ಸ್ ಅವರ 75 ರನ್ ನೆರವಿನಿಂದ ಇಂಗ್ಲೆಂಡ್ ಬೃಹತ್ ಮೊತ್ತದತ್ತ ದಾಪುಗಾಲು ಹಾಕಿದೆ. ಮೊಹಮ್ಮದ್ ಅಮೀರ್ 3 ವಿಕೆಟ್ ಮತ್ತು ಹಸನ್ ಅಲಿ 3 ವಿಕೆಟ್ ಕಬಳಿಸಿದ್ದು, ಇಮದ್ ವಾಸಿಂ ಮತ್ತು ಉಮರ್ ಗುಲ್ ತಲಾ ಒಂದು ವಿಕೆಟ್ ಗಳಿಸಿದರು. ಪಾಕಿಸ್ತಾನ ಈ ಪಂದ್ಯದಲ್ಲಿ ಗೆಲ್ಲುವುದಕ್ಕೆ ಶತಪ್ರಯತ್ನ ಮಾಡಬೇಕಿದ್ದು ಐದು ಪಂದ್ಯಗಳಲ್ಲೂ ಸೋತು ವೈಟ್ ವಾಷ್ ಭೀತಿ ಎದುರಿಸಿದೆ.

ವೆಬ್ದುನಿಯಾವನ್ನು ಓದಿ