ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಗೆದ್ದರೂ ಲಾಭ ಪಡೆದಿದ್ದು ಪಾಕಿಸ್ತಾನ!

ಗುರುವಾರ, 2 ನವೆಂಬರ್ 2017 (09:14 IST)
ನವದೆಹಲಿ: ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಮೊದಲ ಟಿ20 ಪಂದ್ಯವನ್ನು 53 ರನ್ ಗಳಿಂದ ಗೆದ್ದರೂ ಲಾಭ ಪಡೆದಿದ್ದು ಪಾಕಿಸ್ತಾನ ಕ್ರಿಕೆಟ್ ತಂಡ ಎಂದರೆ ನಂಬಲೇ ಬೇಕು!

 
ಇದುವರೆಗೆ ಐಸಿಸಿ ರ್ಯಾಂಕಿಂಗ್ ಪಟ್ಟಿಯಲ್ಲಿ ನಂ.1 ತಂಡವಾಗಿದ್ದ ನ್ಯೂಜಿಲೆಂಡ್ ನ್ನು ಭಾರತ ಸೋಲಿಸಿದ ಕಾರಣ ಕೀವೀಸ್ ದ್ವಿತೀಯ ಸ್ಥಾನಕ್ಕೆ ಕುಸಿಯಿತು. ಪಾಕಿಸ್ತಾನ ಇದುವರೆಗೆ ದ್ವಿತೀಯ ಸ್ಥಾನದಲ್ಲಿತ್ತು.

ಆದರೆ ಟೀಂ ಇಂಡಿಯಾ ವಿರುದ್ಧ ಸೋತ ಕಾರಣಕ್ಕೆ ನ್ಯೂಜಿಲೆಂಡ್ ದ್ವಿತೀಯ ಸ್ಥಾನಕ್ಕೆ ತಳ್ಳಲ್ಪಟ್ಟರೆ, ಪಾಕಿಸ್ತಾನ ಇದೇ ಮೊದಲ ಬಾರಿಗೆ ಟಿ20 ರ್ಯಾಂಕಿಂಗ್ ಪಟ್ಟಿಯಲ್ಲಿ ನಂ.1 ಆಗಿ ಮೆರೆಯಿತು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಪಾಕ್ ಕ್ರಿಕೆಟ್ ಅಭಿಮಾನಿಗಳು ಟೀಂ ಇಂಡಿಯಾ ಮತ್ತು ನಾಯಕ ಕೊಹ್ಲಿ ಬಗ್ಗೆ ವ್ಯಂಗ್ಯವಾಡಿದ್ದು, ನೀವು ಗೆದ್ದಿದ್ದಕ್ಕೆ ನಮಗೆ ಉಪಕಾರವಾಯಿತು. ಈ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ನಮ್ಮ ನಂ.1 ಪಟ್ಟ ಭದ್ರಗೊಳಿಸಿ ಎಂದು ಪಾಕ್ ಅಭಿಮಾನಿಗಳು ಟೀಂ ಇಂಡಿಯಾಗೆ ಕೇಳಿಕೊಂಡಿದ್ದಾರೆ.

ಇನ್ನು ಕೆಲವರು ಗೆದ್ದರೂ ಟೀಂ ಇಂಡಿಯಾ ಸೋತಂತೆ. ಈಗ ನಿಮ್ಮ ತಂಡ ನ್ಯೂಜಿಲೆಂಡ್ ವಿರುದ್ಧ ಕ್ಲೀನ್ ಸ್ವೀಪ್ ಮಾಡಿಕೊಳ್ಳಲಿ ಎಂದು ಬೇಡಿಕೊಳ್ಳುವ ಕರ್ಮ ನಮಗೆ ಎಂದು ವ್ಯಂಗ್ಯವಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ