ಐಪಿಎಲ್ ಪಂದ್ಯದ ವೇಳೆ ಚಿನ್ನಸ್ವಾಮಿಯಲ್ಲಿ ಕಳಪೆ ಆಹಾರ: ಕೆಎಸ್ ಸಿಎ ವಿರುದ್ಧ ಪ್ರಕರಣ ದಾಖಲು

Krishnaveni K

ಬುಧವಾರ, 15 ಮೇ 2024 (15:22 IST)
ಬೆಂಗಳೂರು: ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದ ವೇಳೆ ಕಳಪೆ ಆಹಾರ ಪೂರೈಕೆ ಮಾಡಿದ ಆರೋಪದಲ್ಲಿ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ವಿರುದ್ಧ ದೂರು ದಾಖಲಾಗಿದೆ.

ಇತ್ತೀಚೆಗೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆರ್ ಸಿಬಿ ನಡುವೆ ಪಂದ್ಯ ನಡೆದಿತ್ತು. ಈ ವೇಳೆ ಕಳಪೆ ಆಹಾರ ಪೂರೈಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಮೈದಾನಕ್ಕೆ ಹೊರಗಿನಿಂದ ಆಹಾರ ತರುವಂತಿಲ್ಲ. ಆದರೆ ಮೈದಾನದೊಳಗೆ ನೀಡಿದ ಆಹಾರ ಕಳಪೆ ಗುಣಮಟ್ಟದ್ದಾಗಿತ್ತು.

ಈ ಬಗ್ಗೆ ಚೈತನ್ಯ ಎಂಬವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪಂದ್ಯದ ನಡುವೆ ನೀಡಿದ್ದ ಊಟ ಕಳಪೆ ಗುಣಮಟ್ಟದ್ದಾಗಿತ್ತು. ಇದನ್ನು ಸೇವಿಸಿದ ತಕ್ಷಣ ತನಗೆ ಹೊಟ್ಟೆ ತೊಳೆಸಿದಂತಾಗಿದ್ದು, ತಲೆ ಸುತ್ತು ಬಂದು ಬಿದ್ದಿರುವುದಾಗಿ ದೂರುದಾರರು ಹೇಳಿದ್ದಾರೆ.

ಪ್ರಕರಣದ ಬಗ್ಗೆ ಕೆಎಸ್ ಸಿಎ ಆಡಳಿತ ಮಂಡಳಿ, ಕ್ಯಾಂಟೀನ್ ವ್ಯವಸ್ಥಾಪಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಊಟ ಸೇವಿಸಿದ ತಕ್ಷಣ ಚೈತನ್ಯಗೆ ಹೊಟ್ಟೆ ತೊಳೆಸಿದಂತಾಗಿತ್ತು. ಬಳಿಕ ಅಲ್ಲಿಯೇ ಕುಸಿದು ಬಿದ್ದಿದ್ದರು. ಬಳಿಕ ಅವರನ್ನು ಮೈದಾನ ಸಿಬ್ಬಂದಿಯ ಸಹಾಯದಿಂದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ