ಐಪಿಎಲ್ 2024: ಮತ್ತೆ ಅಗ್ರ ಪಟ್ಟಕ್ಕೇರುವ ತವಕದಲ್ಲಿರುವ ರಾಜಸ್ಥಾನ್ ರಾಯಲ್ಸ್, ಪಂಜಾಬ್ ಕಿಂಗ್ಸ್ ಎದುರಾಳಿ
ಒಟ್ಟು 12 ಪಂದ್ಯಗಳನ್ನಾಡಿ 8 ಗೆಲುವು ಕಂಡಿರುವ ರಾಜಸ್ಥಾನ್ ರಾಯಲ್ಸ್ ಈಗ 16 ಅಂಕ ಪಡೆದುಕೊಂಡಿದೆ. ಸದ್ಯಕ್ಕೆ ರಾಜಸ್ಥಾನ್ ಎರಡನೇ ಸ್ಥಾನದಲ್ಲಿದೆ. ಸತತ ಗೆಲುವುಗಳನ್ನು ಕಂಡು ಬೀಗುತ್ತಿದ್ದ ರಾಜಸ್ಥಾನ್ ಕಳೆದ ಮೂರು ಪಂದ್ಯಗಳ ಸತತ ಸೋಲು ಕಂಡು ಮುಖಭಂಗ ಅನುಭವಿಸಿದೆ.
ಆದರೆ ಪ್ಲೇ ಆಫ್ ಹಂತದಲ್ಲಿರುವಾಗ ರಾಜಸ್ಥಾನ್ ಗೆ ಈಗ ಗೆಲುವು ಅನಿವಾರ್ಯ. ಕಳೆದ ಪಂದ್ಯದಲ್ಲಂತೂ ಕಳಪೆ ಹೊಡೆತಗಳಿಗೆ ಕೈ ಹಾಕಿ ರಾಜಸ್ಥಾನ್ ತಾನಾಗಿಯೇ ಸೋಲೊಪ್ಪಿಕೊಂಡಿತು. ಈಗ ಕೈಗೆ ಸಿಕ್ಕ ತುತ್ತು ಬಾಯಿಗೆ ಬರದಂತಾಗಬಾರದು ಎಂದರೆ ರಾಜಸ್ಥಾನ್ ಮತ್ತೆ ಗೆಲುವಿನ ಹಳಿಗೆ ಬರಲೇಬೇಕಿದೆ.
ಇತ್ತ ಪಂಜಾಬ್ ಕಿಂಗ್ಸ್ ಗೆ ಈ ಫಲಿತಾಂಶ ಏನೂ ಪರಿಣಾಮ ಬೀರದು. 12 ಪಂದ್ಯಗಳಿಂದ ಕೇವಲ 4 ಗೆಲುವು ಕಂಡಿರುವ ಪಂಜಾಬ್ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಸೋತರೆ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ. ಗೆದ್ದರೆ ಒಂದು ಸ್ಥಾನ ಮೇಲೇರಬಹುದು. ಹೀಗಾಗಿ ಈ ಪಂದ್ಯ ರಾಜಸ್ಥಾನ್ ಪಾಲಿಗೆ ಮಹತ್ವದ್ದಾಗಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.