R Ashwin video: ಮಹಿಳಾ ಅಂಪಾಯರ್ ಮೇಲೆ ಆರ್ ಅಶ್ವಿನ್ ರೋಷಾವೇಷ

Krishnaveni K

ಸೋಮವಾರ, 9 ಜೂನ್ 2025 (12:19 IST)
Photo Credit: X
ಚೆನ್ನೈ: ಟಿಎನ್ ಪಿಎಲ್ ಟೂರ್ನಿಯಲ್ಲಿ ದಿಂಡಿಗಲ್ ಡ್ರಾಗನ್ಸ್ ನಾಯಕರಾಗಿರುವ ಹಿರಿಯ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಮೈದಾನದಲ್ಲೇ ಮಹಿಳಾ ಅಂಪಾಯರ್ ಜೊತೆ ರೋಷಾವೇಷ ತೋರಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಐ ಡ್ರೀಮ್ ತಿರುಪ್ಪುರ್ ತಮಿಳಿಯನ್ಸ್ ವಿರುದ್ಧದ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಬ್ಯಾಟಿಂಗ್ ಮಾಡುತ್ತಿದ್ದರು. ಸಾಯಿ ಕಿಶೋರ್ ಬೌಲಿಂಗ್ ನಲ್ಲಿ ಅಶ್ವಿನ್ ಎಲ್ ಬಿಡಬ್ಲ್ಯು ಔಟ್ ಆದರು. ಬಾಲ್ ಕೊಂಚ ಲೆಗ್ ಸ್ಟಂಪ್ ಕಡೆಗೆ ಹೋಗುತ್ತಿದ್ದ ಕಾರಣ ಅಶ್ವಿನ್ ತಮ್ಮ ವಿರುದ್ಧ ಔಟ್ ತೀರ್ಪು ನೀಡಿದ ಮಹಿಳಾ  ಅಂಪಾಯರ್ ವಿರುದ್ಧ ಸಿಟ್ಟಾದರು.

ನಾನ್ ಸ್ಟ್ರೈಕರ್ ಎಂಡ್ ಕಡೆಗೆ ಬಂದ ಅಶ್ವಿನ್ ಮಹಿಳಾ ಅಂಪಾಯರ್ ಮೇಲೆ ಕೂಗಾಡಿದ್ದಾರೆ. ಆದರೆ ಅಂಪಾಯರ್ ಅಶ್ವಿನ್ ಕಡೆಗೆ ತಿರುಗಿಯೂ ನೋಡದೇ ಮುಂದೆ ನಡೆದಿದ್ದಾರೆ. ಕೊನೆಗೆ ಅಶ್ವಿನ್ ನಿರ್ವಾಹವಿಲ್ಲದೇ ಪೆವಿಲಿಯನ್ ಕಡೆಗೆ ಕೂಗಾಡುತ್ತಲೇ ಹೆಜ್ಜೆ ಹಾಕಿದ್ದಾರೆ.

Ashwin reaction ????

Ashwin nah Mind Voice: Youtube la video potu na yarunu katran ????pic.twitter.com/iqGmEKeyqn

— Prakash (@definitelynot05) June 8, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ