ವಿಶ್ವಕಪ್ ಫೈನಲ್ ಸೋತಿದ್ದೇಕೆ? ಬಿಸಿಸಿಐ ಪ್ರಶ್ನೆಗೆ ತಕ್ಕ ಉತ್ತರ ಕೊಟ್ಟ ಕೋಚ್ ದ್ರಾವಿಡ್

ಭಾನುವಾರ, 3 ಡಿಸೆಂಬರ್ 2023 (16:52 IST)
ಮುಂಬೈ: ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಟೀಂ ಇಂಡಿಯಾ ಆಘಾತಕಾರಿಯಾಗಿ ಆಸ್ಟ್ರೇಲಿಯಾ ವಿರುದ್ಧ ಸೋತಿದ್ದು ಎಲ್ಲರಿಗೂ ನಿರಾಸೆ ತಂದಿತ್ತು.

ಇದೀಗ ಬಿಸಿಸಿಐ ಕೋಚ್ ರಾಹುಲ್ ದ್ರಾವಿಡ್ ಬಳಿ ಸೋಲಿನ ಕಾರಣಕ್ಕೆ ವಿವರಣೆ ಕೇಳಿದೆ. ಇದಕ್ಕೆ ಕೋಚ್ ದ್ರಾವಿಡ್ ಕೂಡಾ ತಕ್ಕ ಉತ್ತರ ಕೊಟ್ಟಿದ್ದಾರೆ.

ಬಿಸಿಸಿಐ ಜೊತೆ ನಡೆದ ಸಭೆಯಲ್ಲಿ ದ್ರಾವಿಡ್ ವಿಶ್ವಕಪ್ ಫೈನಲ್ ಸೋಲಿಗೆ ಸೂಕ್ತ ಕಾರಣ ನೀಡಿದ್ದಾರೆ. ಫೈನಲ್ ಗೆ ಅಹಮ್ಮದಾಬಾದ್ ನಲ್ಲಿ ತಯಾರಾಗಿದ್ದ ಪಿಚ್ ತಿರುವ ಪಡೆಯಬಹುದು ಎಂದು ಮೊದಲೇ ಕ್ಯುರೇಟರ್ ಗಳು ವರದಿ ನೀಡಿದ್ದರು. ಅದಕ್ಕೆ ತಕ್ಕಂತೆ ತಂಡ ಯೋಜನೆ ರೂಪಿಸಿತ್ತು. ಆದರೆ ನಾವು ಅಂದುಕೊಂಡಷ್ಟು ತಿರುವು ಪಡೆಯದೇ ಇದ್ದಿದ್ದರಿಂದ ಹಿನ್ನಡೆಯಾಯಿತು ಎಂದು ದ್ರಾವಿಡ್ ವಿವರಣೆ ನೀಡಿದ್ದಾರೆ.

ಈ ಸಭೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಉಪಾಧ್ಯಕ್ಷ ರಾಜೀವ್ ಶುಕ್ಲಾ ಮತ್ತು ಖಜಾಂಜಿ ಆಶಿಷ್ ಶೆಲಾರ್ ಈ ಸಭೆಯಲ್ಲಿ ಉಪಸ್ಥಿತರಿದ್ದರು ಎಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ