ಸಾಮಾನ್ಯರಂತೆ ಸಿಮೆಂಟ್ ಹಾಸಿನ ಮೇಲೆ ಕೂತು ಪುತ್ರನ ಪಂದ್ಯ ವೀಕ್ಷಿಸಿದ ರಾಹುಲ್ ದ್ರಾವಿಡ್

ಶನಿವಾರ, 2 ಡಿಸೆಂಬರ್ 2023 (09:40 IST)
Photo Courtesy: Twitter
ಮೈಸೂರು: ಟೀಂ ಇಂಡಿಯಾ ಮುಖ್ಯ ಕೋಚ್, ವಾಲ್ ರಾಹುಲ್ ದ್ರಾವಿಡ್ ಮೈಸೂರಿನಲ್ಲಿ ಪುತ್ರ ಸಮಿತ್ ದ್ರಾವಿಡ್ ಪಂದ್ಯ ವೀಕ್ಷಿಸುತ್ತಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಟೀಂ ಇಂಡಿಯಾ ಕೋಚ್ ನಂತಹ ದೊಡ್ಡ ಹುದ್ದೆಯಲ್ಲಿದ್ದರೂ ದ್ರಾವಿಡ್ ತಮ್ಮ ಪತ್ನಿ ವಿಜೇತಾ ಜೊತೆ ಸಿಮೆಂಟ್ ಹಾಸಿನ ಮೇಲೆ ಕುಳಿತು ಸಾಮಾನ್ಯರಂತೇ ಪಂದ್ಯ ವೀಕ್ಷಿಸಿದ ಪರಿ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ಉನ್ನತ ಸ್ಥಾನದಲ್ಲಿದ್ದರೂ ದ್ರಾವಿಡ್ ಸರಳವಾಗಿರಲು ಇಷ್ಟಪಡುತ್ತಾರೆ ಎಂಬುದಕ್ಕೆ ಇದು ನಿದರ್ಶನ. ದ್ರಾವಿಡ್ ಪುತ್ರ ಸಮಿತ್ ಕೂಚ್ ಬೆಹಾರ್ ಕ್ರಿಕೆಟ್ ಪಂದ್ಯದಲ್ಲಿ ಕರ್ನಾಟಕದ ಅಂಡರ್ 16 ತಂಡದ ನಾಯಕರಾಗಿ ಕಣಕ್ಕಿಳಿದಿದ್ದರು. ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಪಂದ್ಯ ನಡೆಯಿತು.

ಈ ಪಂದ್ಯದಲ್ಲಿ ಮಗನ ಆಟದ ಪರಿ ವೀಕ್ಷಿಸಲು ಸ್ವತಃ ತಂದೆ ದ್ರಾವಿಡ್ ಆಗಮಿಸಿದ್ದರು. ಆದರೆ ಯಾವ ಹಮ್ಮು-ಬಿಮ್ಮು ಇಲ್ಲದೇ ಪಂದ್ಯ ವೀಕ್ಷಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ