ಅಬ್ಬಾ.. ರಾಹುಲ್ ದ್ರಾವಿಡ್ ಗೆ ಎಂಥಾ ಬೇಡಿಕೆ: ಐಪಿಎಲ್ 2025 ಕೋಚ್ ಆಗಲು ಯಾವೆಲ್ಲಾ ತಂಡಗಳಿಂದ ಆಫರ್ ನೋಡಿ

Krishnaveni K

ಗುರುವಾರ, 25 ಜುಲೈ 2024 (10:51 IST)
ಮುಂಬೈ: ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಅದ್ಭುತ ಯಶಸ್ಸು ಪಡೆದಿರುವ ವಾಲ್ ರಾಹುಲ್ ದ್ರಾವಿಡ್ ಗೆ ಈಗ ಐಪಿಎಲ್ ಫ್ರಾಂಚೈಸಿಗಳು ತಮ್ಮ ತಂಡದ ಕೋಚ್ ಆಗುವಂತೆ ಗಾಳ ಹಾಕುತ್ತಿವೆ.

ರಾಹುಲ್ ದ್ರಾವಿಡ್ ಟೀಂ ಇಂಡಿಯಾದಿಂದ ನಿವೃತ್ತರಾದ ಬೆನ್ನಲ್ಲೇ ಅವರನ್ನು ಆರ್ ಸಿಬಿಗೆ ಬರುವಂತೆ ಅಭಿಮಾನಿಗಳು ಆಹ್ವಾನಿಸಿದ್ದರು. ಆದರೆ ಇದರ ನಡುವೆ ದ್ರಾವಿಡ್ ತಮ್ಮ ಹಳೆಯ ತಂಡ ರಾಜಸ್ಥಾನ್ ರಾಯಲ್ಸ್ ಗೆ ಕೋಚ್ ಆಗಲಿದ್ದಾರೆ ಎಂಬ ಸುದ್ದಿಹರಿದಾಡಿತ್ತು.

ಆದರೆ ಕೇವಲ ರಾಜಸ್ಥಾನ್ ಮಾತ್ರವಲ್ಲ, ದ್ರಾವಿಡ್ ಗೆ ಹಲವು ತಂಡಗಳು ಗಾಳ ಹಾಕುತ್ತಿವೆ ಎಂದು ತಿಳಿದುಬಂದಿದೆ. ಇದು ವಾಲ್ ದ್ರಾವಿಡ್ ಗಿರುವ ಡಿಮ್ಯಾಂಡ್ ಗೆ ಸಾಕ್ಷಿ. ಇದೀಗ ಮುಂಬೈ ಇಂಡಿಯನ್ಸ್ ತಂಡವೂ ದ್ರಾವಿಡ್ ರನ್ನು ಕೋಚ್ ಆಗಿ ಕರೆತರಲು ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಿದೆ ಎನ್ನಲಾಗಿದೆ.  ಇನ್ನಷ್ಟು ತಂಡಗಳು ತೆರೆಮರೆಯಲ್ಲೇ ವಿಶ್ವ ಚಾಂಪಿಯನ್ ಕೋಚ್ ನ್ನು ತಮ್ಮ ತಂಡಕ್ಕೆ ಕರೆತರಲು ಪ್ರಯತ್ನ ನಡೆಸುತ್ತಿವೆಯಂತೆ. ಹೀಗಾಗಿ ಈ ಬಾರಿ ದ್ರಾವಿಡ್ ಭಾರೀ ಮೊತ್ತಕ್ಕೆ ಯಾವುದಾದರೂ ಒಂದು ಐಪಿಎಲ್ ತಂಡಕ್ಕೆ ಕೋಚ್ ಆಗುವುದಂತೂ ಖಚಿತ.

ಇದರ ನಡುವೆ ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ನ್ನು ಅಳವಡಿಸುವ ಬಗ್ಗೆ ನಡೆಯಲಿರುವ ತಜ್ಞರ ಸಮಾಲೋಚನೆ ಸಭೆಗೂ ರಾಹುಲ್ ದ್ರಾವಿಡ್ ಆಯ್ಕೆಯಾಗಿದ್ದಾರೆ ಎಂಬ ಮಾಹಿತಿಯಿದೆ. ದ್ರಾವಿಡ್ ಕ್ರಿಕೆಟ್ ನಲ್ಲಿ ಉತ್ತಮ ಕೋಚ್ ಮಾತ್ರವಲ್ಲ, ಸಮಾಲೋಚಕ ಕೂಡಾ. ಹೀಗಾಗಿ ಅವರಿಗೆ ಈ ಗೌರವ ಸಿಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ