ಮುಂಬೈ ಇಂಡಿಯನ್ಸ್ ತಂಡದಲ್ಲಿ ಮೂವರು ಕ್ಯಾಪ್ಟನ್ಸ್: ಮೂವರಲ್ಲಿ ಈ ಬಾರಿ ಒಬ್ಬರ ವಿಕೆಟ್ ಡೌನ್ ಆಗೋದು ಖಂಡಿತಾ

Krishnaveni K

ಮಂಗಳವಾರ, 23 ಜುಲೈ 2024 (09:42 IST)
ಮುಂಬೈ: ಐಪಿಎಲ್ 2025 ಕ್ಕೆ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದ್ದು ಇದಕ್ಕೆ ಮೊದಲು ಯಾವೆಲ್ಲಾ ಆಟಗಾರರು ರಿಲೀಸ್ ಆಗಲಿದ್ದಾರೆ ಎಂಬ ಸುದ್ದಿಗಳು ಈಗಾಗಲೇ ಹರಡಿವೆ. ಈ ಪೈಕಿ ಮುಂಬೈ ಇಂಡಿಯನ್ಸ್ ತಂಡದಿಂದ ದೊಡ್ಡ ಸುದ್ದಿಯೊಂದು ಕೇಳಿಬರುತ್ತಿದೆ.

ಮುಂಬೈ ಇಂಡಿಯನ್ಸ್ ತಂಡದಲ್ಲಿ ಈಗ ಒಬ್ಬರು, ಇಬ್ಬರಲ್ಲ ಮೂವರು ನಾಯಕರಿದ್ದಾರೆ. ಒಬ್ಬರು ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಇದ್ದರೆ ಉಳಿದ ಇಬ್ಬರು ಟೀಂ ಇಂಡಿಯಾದ ನಾಯಕರಾದ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್. ಈ ಮೂಲಕ ಒಂದೇ ತಂಡದಲ್ಲಿ ಮೂವರು ನಾಯಕರಿದ್ದಂತಾಗಿದೆ.

ತಂಡದಲ್ಲಿ ಇರುವವರು ಎಲ್ಲರೂ ನಾಯಕರೇ ಆದರೂ ಹೊಂದಾಣಿಕೆ ಕಷ್ಟವೇ. ಈಗ ಮುಂಬೈ ತಂಡದಲ್ಲೂ ಆಗಿರುವುದು ಇದೇ. ಆದರೆ ಈ ಬಾರಿ ಮೆಗಾ ಹರಾಜು ಪ್ರಕ್ರಿಯೆಗೆ ಮುನ್ನ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ತಂಡ ಬಿಡಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

ಈ ಮೊದಲು ರೋಹಿತ್ ಶರ್ಮಾ ಮುಂಬೈ ತಂಡವನ್ನು ತೊರೆಯಲಿದ್ದಾರೆ ಎಂಬ ಸುದ್ದಿಗಳಿತ್ತು. ಆದರೆ ಈಗ ಟಿ20 ವಿಶ್ವಕಪ್ ಗೆಲುವಿನ ಬಳಿಕ ರೋಹಿತ್ ಗೆ ಬೇಡಿಕೆ ಹೆಚ್ಚಾಗಿದ್ದು ಅವರು ಮುಂಬೈನಲ್ಲೇ ಉಳಿದುಕೊಳ್ಳಲಿದ್ದಾರೆ ಎಂಬ ಸುದ್ದಿಗಳಿವೆ.  ಟಿ20 ಸ್ಪೆಷಲಿಸ್ಟ್ ಆಟಗಾರ ಸೂರ್ಯಕುಮಾರ್ ಈಗ ಪಡೆಯುತ್ತಿರುವ ಸಂಭಾವನೆ ಕೇವಲ 8 ಕೋಟಿ ರೂ. ಇಶಾನ್ ಕಿಶನ್ ಕೂಡಾ ಅವರಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ. ಹೀಗಾಗಿ ಈ ಹರಾಜಿಗೆ ಮುನ್ನ ಮುಂಬೈ ತಂಡ ತೊರೆದು ಹೆಚ್ಚಿನ ಬೆಲೆಗೆ ಬಿಕರಿಯಾಗುವ ವಿಶ್ವಾಸದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ