‘ವಾಲ್’ ರಾಹುಲ್ ದ್ರಾವಿಡ್ ಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ

ಸೋಮವಾರ, 2 ಜುಲೈ 2018 (10:35 IST)
ದುಬೈ: ಕ್ರಿಕೆಟ್ ಜಗತ್ತು ಕಂಡ ಅಪರೂಪದ ಕ್ರಿಕೆಟಿಗರಲ್ಲೊಬ್ಬರಾದ ರಾಹುಲ್ ದ್ರಾವಿಡ್ ಗೆ ಐಸಿಸಿಯ ಹಾಲ್ ಆಫ್ ಫೇಮ್ ಕ್ರಿಕೆಟಿಗರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
 

ವಾಲ್ ಖ್ಯಾತಿಯ ದ್ರಾವಿಡ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತೀ ಹೆಚ್ಚು ರನ್ ಗಳಿಸಿದವರ ಪೈಕಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅದಕ್ಕಿಂತ ಹೆಚ್ಚು ಅವರ ಒಂದೊಂದು ಇನಿಂಗ್ಸ್ ಕೂಡಾ ಇಂದಿಗೂ ಕ್ರಿಕೆಟ್ ಪ್ರಿಯನ ಕಣ್ಣಿಗೆ ಕಟ್ಟಿದಂತಿದೆ.

ವಿಶ್ವ ವಿಖ್ಯಾತಿಯ ಜಂಟಲ್ ಮೆನ್ ಕ್ರಿಕೆಟಿಗನನ್ನು ಹಾಲ್ ಆಫ್ ಫೇಮ್ ಗೌರವ ಸಲ್ಲಿಸಿರುವ ವಿಚಾರವನ್ನು ಐಸಿಸಿ ತನ್ನ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದೆ. ‘ಅತ್ಯಪೂರ್ವ ರಕ್ಷಣಾತ್ಮಕ ಕಲೆ ಹೊಂದಿದ್ದ ಕಲಾತ್ಮಕ ಆಟಗಾರ ದ್ರಾವಿಡ್. ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಭಾರತ ಕಂಡ ಅತ್ಯಪೂರ್ವ ಟೆಸ್ಟ್ ಬ್ಯಾಟ್ಸ್ ಮನ್ ಹಾಗೂ ಮೂರನೇ ಕ್ರಮಾಂಕದಲ್ಲಿ ಸರಿಸಾಟಿಯಿಲ್ಲದ ಸವ್ಯಸಾಚಿ’ ಎಂದು ಐಸಿಸಿ ಬಣ್ಣಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ