ರಾಹುಲ್ ದ್ರಾವಿಡ್ ಕುರಿತಾಗಿ ಸಿನಿಮಾದಲ್ಲಿ ಯಾರು ನಟಿಸಿದರೆ ಸೂಕ್ತ? ದ್ರಾವಿಡ್ ಉತ್ತರವೇನು ಗೊತ್ತಾ?!

ಶುಕ್ರವಾರ, 27 ಜುಲೈ 2018 (09:28 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರ ಪೈಕಿ ಧೋನಿ, ಸಚಿನ್ ಕುರಿತಾದ ಸಿನಿಮಾಗಳು ಈಗಾಗಲೇ ಬಂದಿವೆ. ಒಂದು ವೇಳೆ ನಮ್ಮ ನೆಚ್ಚಿನ ಕನ್ನಡಿಗ ರಾಹುಲ್ ದ್ರಾವಿಡ್ ಕುರಿತಾದ ಸಿನಿಮಾ ಬಂದರೆ ಆ ಪಾತ್ರ ನಿಭಾಯಿಸಲು ಯಾರು ಸೂಕ್ತರಾಗಬಹುದು?
 

ಇದೇ ಪ್ರಶ್ನೆಯನ್ನು ಸ್ವತಃ ದ್ರಾವಿಡ್ ಗೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕೇಳಲಾಗಿತ್ತು. ಇದಕ್ಕೆ ಕ್ರಿಕೆಟ್ ಲೋಕದ ಮಿ. ಪರ್ಫೆಕ್ಷನಿಸ್ಟ್ ದ್ರಾವಿಡ್, ಸಿನಿಮಾ ಲೋಕದ ಮಿ. ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಹೆಸರು ಹೇಳಿದ್ದಾರೆ.

 ನನ್ನ ಜೀವನದ ಕುರಿತಾದ ಸಿನಿಮಾ ಪಾತ್ರಕ್ಕೆ ಅಮೀರ್ ಖಾನ್ ನ್ಯಾಯ ಒದಗಿಸಬಹುದು ಎಂದು ನನಗನಿಸುತ್ತದೆ ಎಂದು ದ್ರಾವಿಡ್ ಹೇಳಿದ್ದಾರೆ. ದ್ರಾವಿಡ್ ಕ್ರಿಕೆಟ್ ಲೋಕದಲ್ಲಿ ಅವರ ಸಮೀಪವರ್ತಿಗಳಿಂದ ಮಿ.ಪರ್ಫೆಕ್ಷನಿಸ್ಟ್ ಎಂದು ಕರೆಯಿಸಿಕೊಳ್ಳುತ್ತಾರೆ. ಅದೇ ರೀತಿ ಅಮೀರ್ ಖಾನ್ ಸಿನಿಮಾ ಕ್ಷೇತ್ರದಲ್ಲಿ ಮಿ. ಪರ್ಫೆಕ್ಷನಿಸ್ಟ್ ಎಂದೇ ಹೆಸರು ವಾಸಿ. ಹೀಗಾಗಿ ತಮ್ಮ ಪಾತ್ರಕ್ಕೆ ಅಮೀರ್ ಖಾನ್ ಅವರೇ ಸೂಕ್ತ ವ್ಯಕ್ತಿ ಎಂದು ದ್ರಾವಿಡ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ