ಕಾಮನ್ ವೆಲ್ತ್ ಗೇಮ್ಸ್ ನಲ್ಲಿಂದು ಭಾರತ-ಆಸ್ಟ್ರೇಲಿಯಾ ಕ್ರಿಕೆಟ್ ಪಂದ್ಯ
ಶುಕ್ರವಾರ, 29 ಜುಲೈ 2022 (08:00 IST)
ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ 2022 ರಲ್ಲಿ ಇಂದು ಭಾರತ ಮಹಿಳಾ ಕ್ರಿಕೆಟ್ ತಂಡ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ.
ಈ ಬಾರಿ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿರುವ ಪ್ರಬಲ ಆಸ್ಟ್ರೇಲಿಯಾವನ್ನು ಸೋಲಿಸುವುದು ಹರ್ಮನ್ ಪ್ರೀತ್ ಕೌರ್ ಪಡೆಗೆ ಸುಲಭವಲ್ಲ. ಸ್ಮೃತಿ ಮಂಥನಾ, ಶಫಾಲಿ ವರ್ಮ, ಯಶಿಕಾ ಭಾಟಿಯಾ ಮತ್ತು ಸ್ವತಃ ನಾಯಕಿ ಹರ್ಮನ್ ಪ್ರೀತ್ ಕೌರ್ ತಂಡದ ಬ್ಯಾಟಿಂಗ್ ಶಕ್ತಿ. ಆದರೆ ಒತ್ತಡವನ್ನು ಎದುರಿಸುವಲ್ಲಿ ಭಾರತ ವನಿತೆಯರು ಯಾವಾಗಲೂ ಸೋಲುತ್ತಾರೆ ಎನ್ನುವುದೇ ಆತಂಕ ವಿಷಯ.
ಬೌಲಿಂಗ್ ನಲ್ಲಿ ಕನ್ನಡತಿ ರಾಜೇಶ್ವರಿ ಗಾಯಕ್ ವಾಡ್, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್ ತಂಡದ ಶಕ್ತಿಯಾಗಿದ್ದಾರೆ. ಈ ಪೈಕಿ ಪೂಜಾ ಬ್ಯಾಟಿಂಗ್ ನಲ್ಲೂ ಮಿಂಚಬಲ್ಲರು. ಬಹಳ ವರ್ಷದ ನಂತರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಕ್ರಿಕೆಟ್ ನಡೆಯುತ್ತಿದ್ದು, ಭಾರತ ತಂಡ ಕನಿಷ್ಠ ಕಂಚಿನ ಪದಕವಾದರೂ ಗೆಲ್ಲುವ ವಿಶ್ವಾಸವಿದೆ.