ಭಾರತ-ವಿಂಡೀಸ್ ಏಕದಿನ: ಗಿಲ್ ಭರ್ಜರಿ ಬ್ಯಾಟಿಂಗ್, ಬಾಲ ಕತ್ತರಿಸಿದ ಚಾಹಲ್, ಟೀಂ ಇಂಡಿಯಾ ಕ್ಲೀನ್ ಸ್ವೀಪ್

ಗುರುವಾರ, 28 ಜುಲೈ 2022 (08:10 IST)
ಟ್ರಿನಿಡಾಡ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರನೇ ಏಕದಿನ ಪಂದ್ಯವನ್ನು ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ 119 ರನ್ ಗಳಿಂದ ಗೆದ್ದುಕೊಂಡ ಟೀಂ ಇಂಡಿಯಾ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಗೆ ನಾಯಕ ಶಿಖರ್ ಧವನ್ (58), ಶುಬ್ನಂ ಗಿಲ್ ಅಜೇಯ 98 ರನ್ ಗಳಿಸಿ ಭದ್ರ ಬುನಾದಿ ಹಾಕಿಕೊಟ್ಟರು. ಮಳೆಯಿಂದಾಗಿ ಅಡಚಣೆ ಉಂಟಾಗಿದ್ದರಿಂದ ಪಂದ್ಯವನ್ನು 36 ಓವರ್ ಗಳಿಗೆ ಕಡಿತಗೊಳಿಸಲಾಯಿತು. ಬಹುಶಃ ಮಳೆಯಿಲ್ಲದೇ ಹೋಗಿದ್ದರೆ ಶುಬ್ನಂ ಶತಕ ಸಿಡಿಸುತ್ತಿದ್ದರು.

ಈ ಮೊತ್ತ ಬೆನ್ನತ್ತಿದ ವಿಂಡೀಸ್ ಗೆ ಮೊಹಮ್ಮದ್ ಸಿರಾಜ್ ಆರಂಭದಲ್ಲೇ ಎರಡು ವಿಕೆಟ್ ಕಬಳಿಸಿ ಆಘಾತ ನೀಡಿದರು. ಬಳಿಕ ಯಜುವೇಂದ್ರ ಚಾಹಲ್ ನಾಲ್ಕು ವಿಕೆಟ್ ಕಬಳಿಸಿ ವಿಂಡೀಸ್ ಮೇಲೇಳದಂತೆ ನೋಡಿಕೊಂಡರು. ಇದರಿಂದಾಗಿ ವಿಂಡೀಸ್ 26 ಓವರ್ ಗಳಲ್ಲಿ 137 ರನ್ ಗಳಿಗೆ ಆಲೌಟ್ ಆಯಿತು. ಬ್ರೆಂಡನ್ ಕಿಂಗ್ ಮತ್ತು ನಿಕಲಸ್ ಪೂರನ್ ತಲಾ 42 ರನ್ ಗಳಿಸಿದರು. ಇದರೊಂದಿಗೆ ವಿಂಡೀಸ್ ರನ್ ಲೆಕ್ಕಾಚಾರದಲ್ಲಿ ಭಾರತ ಅತೀ ದೊಡ್ಡ ಗೆಲುವು ಸಂಪಾದಿಸಿ ದಾಖಲೆ ಮಾಡಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ