Rahul Dravid: ಐಪಿಎಲ್ ನ ಅತೀ ವೇಗದ ಶತಕ ಸಿಡಿಸಿದ ವೈಭವ್ ಸೂರ್ಯವಂಶಿ: ವೀಲ್ ಚೇರ್ ನಿಂದ ಎದ್ದೇಬಿಟ್ಟ ದ್ರಾವಿಡ್
ನಿನ್ನೆ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ಪರ ಯಶಸ್ವಿ ಜೈಸ್ವಾಲ್ ಜೊತೆ ಆರಂಭಿಕರಾಗಿ ಕಣಕ್ಕಿಳಿದ ವೈಭವ್ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ. ಇದು ಐಪಿಎಲ್ ನಲ್ಲೇ ಅತೀ ವೇಗದ ಶತಕವಾಗಿದೆ. ಅವರ ಶತಕದ ಅಬ್ಬರಕ್ಕೆ ಇಡೀ ಸ್ಟೇಡಿಯಂ ಹುಚ್ಚೆದ್ದು ಕುಣಿದಿತ್ತು.
ಅದರಲ್ಲೂ ಕೋಚ್ ರಾಹುಲ್ ದ್ರಾವಿಡ್ ಸಂಭ್ರಮವಂತೂ ಹೇಳತೀರದಾಗಿತ್ತು. ಕಾಲು ಶಸ್ತ್ರಚಿಕಿತ್ಸೆಗೊಳಗಾಗಿರುವ ದ್ರಾವಿಡ್ ಇದುವರೆಗೆ ಸ್ಟಿಕ್ ಸಹಾಯವಿಲ್ಲದೇ ಎದ್ದು ನಿಲ್ಲುತ್ತಿರಲಿಲ್ಲ. ಆದರೆ ನಿನ್ನೆ ವೈಭವ್ ಶತಕ ಸಿಡಿಸುತ್ತಿದ್ದಂತೇ ಕೂಲ್ ದ್ರಾವಿಡ್ ಕೂಡಾ ರೊಚ್ಚಿಗೆದ್ದರು.
ತಮ್ಮ ಸೀಟ್ ನಿಂದ ಮೇಲೆದ್ದು ಎರಡೂ ಕೈಯೆತ್ತಿಕೊಂಡು ಭಾರೀ ಸಂಭ್ರಮದಿಂದ ಕುಣಿದಾಡಿದ್ದಾರೆ. ಒಂದೆಡೆ ವೈಭವ್ ಶತಕ ಸಿಡಿಸಿದ ಖುಷಿಯಾದರೆ ಇನ್ನೊಂದೆಡೆ ದ್ರಾವಿಡ್ ವೀಲ್ ಚೇರ್ ನಿಂದ ಎದ್ದಿದ್ದು ವಿಶೇಷವಾಗಿತ್ತು.