ರಾಹುಲ್ ದ್ರಾವಿಡ್ ಕಾರು ಆಕ್ಸಿಡೆಂಟ್, ಗೂಡ್ಸ್ ಆಟೋ ಚಾಲಕನ ಜೊತೆ ವಾಗ್ವಾದ ಫುಲ್ ವಿಡಿಯೋ ಇಲ್ಲಿದೆ
ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಘಟನೆ ನಡೆದಿದೆ. ಘಟನೆ ಬಳಿಕ ದ್ರಾವಿಡ್ ಹಾಗೂ ಗೂಡ್ಸ್ ಚಾಲಕ ಪರಸ್ಪರ ವಾಗ್ವಾದ ನಡೆಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪಕ್ಕಾ ಕನ್ನಡದಲ್ಲೇ ದ್ರಾವಿಡ್ ಚಾಲಕನ ಜೊತೆ ವಾಗ್ವಾದ ನಡೆಸಿದ್ದಾರೆ.
ಕನ್ನಿಂಗ್ ಹ್ಯಾಮ್ ರಸ್ತೆ ಮಾರ್ಗವಾಗಿ ದ್ರಾವಿಡ್ ಸಾಗುತ್ತಿದ್ದಾಗ ಟ್ರಾಫಿಕ್ ಜಾಮ್ ಇತ್ತು. ಈ ವೇಳೆ ಹಿಂದಿನಿಂದ ಬಂದ ಗೂಡ್ಸ್ ಆಟೋ ದ್ರಾವಿಡ್ ಕಾರಿಗೆ ಢಿಕ್ಕಿ ಹೊಡೆದಿದೆ. ಇದರಿಂದ ಕೋಪಗೊಂಡ ದ್ರಾವಿಡ್ ಕಾರಿನಿಂದ ಇಳಿದು ಚಾಲಕನನ್ನು ಪ್ರಶ್ನೆ ಮಾಡಿದ್ದಾರೆ.
ಅತ್ತ ಚಾಲಕ ಕೂಡಾ ದ್ರಾವಿಡ್ ಜೊತೆಗೆ ವಾಗ್ವಾದ ನಡೆಸಿದ್ದಾರೆ. ಬಳಿಕ ದ್ರಾವಿಡ್ ಆಟೋ ಚಾಲಕನ ಫೋನ್ ನಂಬರ್ ಕೇಳಿ ಪಡೆದುಕೊಂಡಿದ್ದಾರೆ. ಆದರೆ ಘಟನೆ ಬಗ್ಗೆ ಇಬ್ಬರೂ ಯಾವುದೇ ದೂರು ದಾಖಲಿಸಿಲ್ಲ. ಈ ಘಟನೆಯ ಸಂಪೂರ್ಣ ವಿಡಿಯೋ ಇಲ್ಲಿದೆ ನೋಡಿ.