ಟೀಂ ಇಂಡಿಯಾ ಕ್ಯಾಂಪ್ ನಲ್ಲಿ ಮತ್ತೆ ರಾಹುಲ್ ದ್ರಾವಿಡ್: ವಿಡಿಯೋ ಇಲ್ಲಿದೆ

Krishnaveni K

ಸೋಮವಾರ, 14 ಅಕ್ಟೋಬರ್ 2024 (10:46 IST)
Photo Credit: X
ಬೆಂಗಳೂರು: ಟೀಂ ಇಂಡಿಯಾ ಮಾಜಿ ಕೋಚ್ ರಾಹುಲ್ ದ್ರಾವಿಡ್ ಮತ್ತೆ ತಂಡದ ಆಟಗಾರರ ಜೊತೆ ನೆಟ್ಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರಿಂದ ನಾನಾ ರೀತಿಯ ಕಾಮೆಂಟ್ ಬಂದಿವೆ.

ಟಿ20 ವಿಶ್ವಕಪ್ ಬಳಿಕ ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಕೋಚ್ ಹುದ್ದೆಯಿಂದ ನಿರ್ಗಮಿಸಿದ್ದರು. ತಂಡದ ಯಶಸ್ವೀ ಕೋಚ್ ಎಂಬ ಹೆಗ್ಗಳಿಕೆಯ ದ್ರಾವಿಡ್ ರನ್ನು ತಂಡದ ನಾಯಕ ರೋಹಿತ್ ಶರ್ಮಾ ಸೇರಿದಂತೆ ಎಲ್ಲರೂ ಮಿಸ್ ಮಾಡಿಕೊಳ್ಳುತ್ತಿದ್ದರು. ಆದರೆ ಈಗ ಮತ್ತೆ ವಾಲ್ ಟೀಂ ಇಂಡಿಯಾ ಕ್ಯಾಂಪ್ ನಲ್ಲಿ ಕಾಣಿಸಿಕೊಂಡು ಅಚ್ಚರಿಗೊಳಪಡಿಸಿದ್ದಾರೆ.

ಅಕ್ಟೋಬರ್ 16 ರಿಂದ ಟೀಂ ಇಂಡಿಯಾ ಮತ್ತು ನ್ಯೂಜಿಲೆಂಡ್ ನಡುವೆ ಟೆಸ್ಟ್ ಸರಣಿ ಆರಂಭವಾಗಲಿದೆ. ಮೊದಲ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಭಾಗಿಯಾಗಲು ಈಗಾಗಲೇ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಿಷಭ್ ಪಂತ್ ಸೇರಿದಂತೆ ಟೆಸ್ಟ್ ಆಟಗಾರರು ಬೆಂಗಳೂರಿನಲ್ಲಿ ಅಭ್ಯಾಸ ಆರಂಭಿಸಿದ್ದಾರೆ.

ಬೆಂಗಳೂರು ಹೇಳಿ ಕೇಳಿ ದ್ರಾವಿಡ್ ಗೆ ತವರು. ಹೀಗಾಗಿ ತಮ್ಮ  ತವರಿಗೆ ಬಂದ ಟೀಂ ಇಂಡಿಯಾ ಸ್ನೇಹಿತರನ್ನು ಭೇಟಿ ಮಾಡಲು ರಾಹುಲ್ ದ್ರಾವಿಡ್ ಎನ್ ಸಿಎಗೆ ಬಂದಿದ್ದಾರೆ. ನೆಟ್ ಪ್ರಾಕ್ಟೀಸ್ ಮಾಡುತ್ತಿದ್ದ ರೋಹಿತ್, ಕೊಹ್ಲಿ, ರಿಷಭ್ ಜೊತೆ ನಗು ನಗುತ್ತಾ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿ ನೆಟ್ಟಿಗರು ವಾಲ್ ಮತ್ತೆ ಟೀಂ ಇಂಡಿಯಾಗೆ ಬನ್ನಿ ಎನ್ನುತ್ತಿದ್ದಾರೆ.

Virat Kohli, Rohit Sharma and Rishabh Pant with Rahul Dravid in practice session ❤️???? pic.twitter.com/FnxtaLWPvV

— Virat Kohli Fan Club (@Trend_VKohli) October 13, 2024

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ