ಟೀಂ ಇಂಡಿಯಾ ಗೆಲುವಿನ ಕನಸಿಗೆ ಮಳೆ ಕಾಟ

ಸೋಮವಾರ, 7 ಜನವರಿ 2019 (08:54 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಸಿಡ್ನಿಯಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಅಂತಿಮ ದಿನದಾಟದಲ್ಲಿ ಮಳೆಯಿಂದಾಗಿ ಇದುವರೆಗೆ ಪಂದ್ಯ ಆರಂಭವಾಗಿಲ್ಲ.


ನಿನ್ನೆಯೂ ಬೆಳಿಗ್ಗೆ ಮತ್ತು ಸಂಜೆ ಮಳೆ ಸುರಿದು ಭಾಗಶಃ ಪಂದ್ಯ ವ್ಯರ್ಥವಾಗಿತ್ತು. ಇಂದೂ ಕೂಡಾ ಬೆಳಿಗ್ಗೆಯಿಂದಲೇ ಭಾರೀ ಮಳೆಯಾಗುತ್ತಿದ್ದು, ಇದುವರೆಗೆ ಒಂದೇ ಒಂದು ಎಸೆತವನ್ನೂ ಎಸೆಯಲು ಸಾಧ್ಯವಾಗಿಲ್ಲ.

ನಿನ್ನೆ ದಿನದಾಟ ಮುಗಿದಾಗ ಆಸ್ಟ್ರೇಲಿಯ ದ್ವಿತೀ ಇನಿಂಗ್ಸ್ ನಲ್ಲಿ ವಿಕೆಟ್ ನಷ್ಟವಿಲ್ಲದೇ 6 ರನ ್ ಗಳಿಸಿತ್ತು. ಭಾರತದ ಮೊದಲ ಇನಿಂಗ್ಸ್ ಮೊತ್ತವಾದ 622 ರನ್ ಗಳ ಬೆನ್ನಟ್ಟಿದ್ದ ಆಸೀಸ್ ಮೊದಲ ಇನಿಂಗ್ಸ್ ನಲ್ಲಿ 300 ರನ್ ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ 322 ರನ್ ಗಳ ಬೃಹತ್ ಹಿನ್ನಡೆ ಅನುಭವಿಸಿತ್ತು.

ಫಾಲೋ ಆನ್ ಗೆ ತುತ್ತಾಗಿದ್ದ ಆಸೀಸ್ ಇಂದು ಸೋಲಿನ ಭೀತಿಯಲ್ಲಿತ್ತು. ಭಾರತೀಯ ಬೌಲರ್ ಗಳ ಪರಿಣಾಮಕಾರಿ ಬೌಲಿಂಗ್ ಎದುರು ಇಂದು ಪಂದ್ಯ ಉಳಿಸಿಕೊಳ್ಳುವುದೇ ಆಸ್ಟ್ರೇಲಿಯಾಗೆ ಸವಾಲಾಗಿತ್ತು. ಆದರೆ ಮಳೆ ಅತಿಥೇಯರ ಮಾನ ಕಾಪಾಡಿದೆ. ಹಾಗಿದ್ದರೂ ಸರಣಿಯಲ್ಲಿ 2-1 ರಿಂದ ಮುನ್ನಡೆ ಹೊಂದಿರುವ ಭಾರತ ಈ ಟೆಸ್ಟ್ ಸರಣಿ ಗೆಲ್ಲುವುದು ಖಚಿತವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ