ಮ್ಯಾರಥಾನ್ ಇನಿಂಗ್ಸ್ ಆಡಿಯೂ ಚೇತೇಶ್ವರ ಪೂಜಾರಗೆ ಸಹ ಕ್ರಿಕೆಟಿಗರ ಕಾಟ ತಪ್ಪಲಿಲ್ಲ!
ಬ್ಯಾಟಿಂಗ್ ಮಾಡುವಾಗ ಪೂಜಾರರ ಶಾಂತ ಸ್ವಭಾವ, ಸುತ್ತಲಿದ್ದವರೂ ಏನೇ ಹೇಳಿದರೂ ತಲೆಕೆಡಿಸಿಕೊಳ್ಳದೇ ತಮ್ಮ ಪಾಡಿಗೆ ಆಡುವ ಶೈಲಿಯನ್ನು ನೋಡಿ ಸಹ ಆಟಗಾರರಾದ ರವಿಚಂದ್ರನ್ ಅಶ್ವಿನ್, ಫಿಟ್ನೆಸ್ ಗುರು ಶಂಕರ್ ಬಸು ತಮ್ಮನ್ನು ವೈಟ್ ವಾಕರ್ ಎಂದು ತಮಾಷೆ ಮಾಡುತ್ತಿದ್ದಾರಂತೆ. ಪೂಜಾರ ಬ್ಯಾಟಿಂಗ್ ಶೈಲಿಗೆ ಮರುಳಾಗಿರುವ ಸಹ ಆಟಗಾರರು ಅಭಿಮಾನದಿಂದಲೇ ಪೂಜಾರಗೆ ಗೇಮ್ ಆಫ್ ಥ್ರೋನ್ ಕ್ಯಾರೆಕ್ಟರ್ ವಾಕರ್ ಗೆ ಹೋಲಿಕೆ ಮಾಡುತ್ತಿದ್ದಾರಂತೆ. ಸ್ವತಃ ಪೂಜಾರ ಸಂದರ್ಶನದಲ್ಲಿ ಈ ವಿಚಾರವನ್ನು ಹೇಳಿಕೊಂಡಿದ್ದಾರೆ.