ಆಸ್ಟ್ರೇಲಿಯಾ ವಿಕೆಟ್ ಕೀಳಲು ಕುಲದೀಪ್ ಯಾದವ್ ಗೆ ಸಹಾಯ ಮಾಡಿದ್ದ ಶೇನ್ ವಾರ್ನ್!

ಭಾನುವಾರ, 6 ಜನವರಿ 2019 (08:57 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಪಿನ್ನರ್ ಕುಲದೀಪ್ ಯಾದವ್ ಆಸ್ಟ್ರೇಲಿಯಾದ ಪ್ರಮುಖ ವಿಕೆಟ್ ಕಿತ್ತು ಗಮನಸೆಳೆದಿದ್ದರು.


ಕುಲದೀಪ್ ಯಾದವ್ ಸ್ಪಿನ್ ಮೋಡಿಗೆ ಆಸೀಸ್ ನಾಯಕ ಟಿಮ್ ಪೇಯ್ನ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜರಂತಹ ಪ್ರಮುಖ ಬ್ಯಾಟ್ಸ್ ಮನ್ ಗಳು ಔಟಾಗಿ ಪೆವಿಲಿಯನ್ ಸೇರಿಕೊಂಡಿದ್ದರು. ಇದರ ಹಿಂದಿನ ರಹಸ್ಯವನ್ನು ದಿನದಾಟದ ನಂತರ ಕಾಮೆಂಟೇಟರ್ ಮುರಳಿ ಕಾರ್ತಿಕ್ ಬಹಿರಂಗಪಡಿಸಿದ್ದಾರೆ.

ಅಡಿಲೇಡ್ ನಲ್ಲಿ ಮೊದಲ ಟೆಸ್ಟ್ ಮುಗಿದ ಬಳಿಕ ಅಭ್ಯಾಸ ನಡೆಸುತ್ತಿದ್ದ ಕುಲದೀಪ್ ಯಾದವ್ ಬಳಿಗೆ ತೆರಳಿದ ಆಸ್ಟ್ರೇಲಿಯಾದ ವಿಶ್ವ ಶ್ರೇಷ್ಠ ಸ್ಪಿನ್ನರ್ ಶೇನ್ ವಾರ್ನ್ ಭಾರತದ ಯುವ ಬೌಲರ್ ಗೆ ಬೌಲಿಂಗ್ ಟಿಪ್ಸ್ ನೀಡಿದ್ದರಂತೆ. ಅವರು ಹೇಳಿಕೊಟ್ಟ ತಂತ್ರಗಾರಿಕೆಯನ್ನೇ ನಾಲ್ಕನೇ ಟೆಸ್ಟ್ ನಲ್ಲಿ ಕುಲದೀಪ್ ಪ್ರಯೋಗ ಮಾಡಿ ಇದೀಗ ಯಶಸ್ವಿಯಾಗಿದ್ದಾರೆ. ಅಂತೂ ಆಸ್ಟ್ರೇಲಿಯಾ ಪತನಕ್ಕೆ ಆಸ್ಟ್ರೇಲಿಯನ್ನರೇ ಕಾರಣವಾದಂತಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ