ವಿರಾಟ್-ಅನುಷ್ಕಾ ಲವ್ ಗುರು ಯಾರು ಗೊತ್ತಾ?!

ಶನಿವಾರ, 4 ನವೆಂಬರ್ 2017 (11:09 IST)
ಮುಂಬೈ: ವಿರಾಟ್ ಕೊಹ್ಲಿ ಮತ್ತು ಅನಷ್ಕಾ ಶರ್ಮಾ ಈಗ ಮೋಸ್ಟ್ ವಾಂಟೆಡ್ ಕಪಲ್. ಇವರಿಬ್ಬರಿಗೂ ಲವ್ ಟಿಪ್ಸ್ ಕೊಡುತ್ತಿದ್ದುದು ಯಾರು ಗೊತ್ತಾ?!

 
ಮಾಜಿ ವೇಗಿ ಜಹೀರ್ ಖಾನ್! ಕೊಹ್ಲಿಗೆ ಭಾರತ ತಂಡದಲ್ಲಿ ಶಿಖರ್ ಧವನ್, ರೋಹಿತ್ ಶರ್ಮಾ ಆಪ್ತ ಮಿತ್ರರು. ಆದರೆ ಲವ್ ವಿಷಯಕ್ಕೆ ಬಂದರೆ ಕೊಹ್ಲಿ ಮಾಜಿ ವೇಗಿ ಜಹೀರ್ ಅಭಿಪ್ರಾಯ ಕೇಳುತ್ತಿದ್ದರಂತೆ.

ಇದನ್ನು ಸ್ವತಃ ಕೊಹ್ಲಿಯೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಅನುಷ್ಕಾ ಜತೆ ಡೇಟಿಂಗ್ ಆರಂಭಿಸಿದಾಗ ಮಾಧ್ಯಮಗಳನ್ನು ನಿಭಾಯಿಸುವುದು ಹೇಗೆಂದು ಜಹೀರ್ ಸಲಹೆ ನೀಡಿದ್ದರಂತೆ. ಅಷ್ಟೇ ಅಲ್ಲ, ಅನುಷ್ಕಾ ಜತೆ ಸಮಸ್ಯೆಯಾದಾಗಲೆಲ್ಲಾ ಜಹೀರ್ ಲವ್ ಟಿಪ್ಸ್ ನೀಡಿದ್ದರಂತೆ. ಇಂತಿಪ್ಪ ಜಹೀರ್ ಗೆ ಇನ್ನೂ ಮದುವೆಯಾಗಿಲ್ಲ. ಬಾಲಿವುಡ್ ನಟಿ ಸಾಗರಿಕಾ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವುದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ