ರಾಂಚಿ ಟೆಸ್ಟ್: ಚೊಚ್ಚಲ ಟೆಸ್ಟ್ ವಿಕೆಟ್ ಪಡೆದು ದಾಖಲೆ ಮಾಡಿದ ನದೀಂ

ಸೋಮವಾರ, 21 ಅಕ್ಟೋಬರ್ 2019 (11:33 IST)
ರಾಂಚಿ: ಭಾರತ ಮತ್ತು ದ.ಆಫ್ರಿಕಾ ನಡುವೆ ರಾಂಚಿಯಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಊಟದ ವಿರಾಮದ ವೇಳೆಗೆ ದ.ಆಫ್ರಿಕಾ 6 ವಿಕೆಟ್ ನಷ್ಟಕ್ಕೆ 129 ರನ್ ಗಳಿಸಿದೆ.


ಚೊಚ್ಚಲ ಟೆಸ್ಟ್ ಪಂದ್ಯವಾಡುತ್ತಿರುವ ಸ್ಪಿನ್ನರ್ ಶಹಬಾಜ್ ನದೀಂ ಚೊಚ್ಚಲ ವಿಕೆಟ್ ಕಬಳಿಸಿದ್ದಾರೆ. ಬವುಮಾರನ್ನು ಸ್ಟಂಪ್ ಔಟ್ ಮಾಡಿದ ನದೀಂ ಈ ಮೂಲಕ ಸ್ಟಂಪ್ ಔಟ್ ಮಾಡಿ ಚೊಚ್ಚಲ ವಿಕೆಟ್ ಗಳಿಸಿದ ಭಾರತದ ನಾಲ್ಕನೇ ಬೌಲರ್ ಎನಿಸಿಕೊಂಡರು.

ಆಫ್ರಿಕಾ ಪರ ಝುಬೈರ್ ಹಝ್ಮಾ 62 ರನ್ ಮತ್ತು ಬವುಮಾ 32 ರನ್ ಗಳಿಸಿದ್ದು ಬಿಟ್ಟರೆ ಉಳಿದವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಬಂದಿಲ್ಲ. ನಾಯಕ ಫಾ ಡು ಪ್ಲೆಸಿಸ್ ಕೇವಲ 1 ರನ್ ಗೆ ವಿಕೆಟ್ ಒಪ್ಪಿಸಿದ್ದು ಆಫ್ರಿಕಾ ಪಾಲಿಗೆ ಭಾರೀ ಸಂಕಟ ತಂದೊಡ್ಡಿತು. ಉಳಿದಂತೆ ಮೊಹಮ್ಮದ್ ಶಮಿ 1 ವಿಕೆಟ್, ಉಮೇಶ್ ಯಾದವ್ ಮತ್ತು ರವೀಂದ್ರ ಜಡೇಜಾ ತಲಾ 2 ವಿಕೆಟ್ ಕಬಳಿಸಿದರು. ಇದೀಗ ಆಫ್ರಿಕಾ ಟೀಂ ಇಂಡಿಯಾ ಮೊದಲ ಇನಿಂಗ್ಸ್ ಮೊತ್ತ ದಾಟಲು 368 ರನ್ ಗಳಿಸಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ