ರಣಜಿ ಟ್ರೋಫಿ ಕ್ರಿಕೆಟ್: ದ್ವಿತೀಯ ಇನಿಂಗ್ಸ್ ನಲ್ಲಿ ಹಿಡಿತ ಕಳೆದುಕೊಂಡ ಕರ್ನಾಟಕ

ಭಾನುವಾರ, 16 ಡಿಸೆಂಬರ್ 2018 (17:43 IST)
ಸೂರತ್: ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕದ ವಿರುದ್ಧ ಗುಜರಾತ್ ದ್ವಿತೀಯ ಇನಿಂಗ್ಸ್ ನಲ್ಲಿ 3 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿದೆ.


ಗುಜರಾತ್ ಮೊದಲ ಇನಿಂಗ್ಸ್ ನಲ್ಲಿ 216 ರನ್ ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಕರ್ನಾಟಕ 389 ರನ್ ಗಳಿಸಿ 173 ರನ್ ಗಳ ಮುನ್ನಡೆ ಸಾಧಿಸಿತ್ತು. ಇದೀಗ ಗುಜರಾತ್ ದ್ವಿತೀಯ ಇನಿಂಗ್ಸ್ ನಲ್ಲಿ 187 ರನ್ ಗಳಿಸಿದ್ದರಿಂದ ಕೇವಲ 14 ರನ್ ಮುನ್ನಡೆಯಲ್ಲಿದೆ.

ಹಾಗಿದ್ದರೂ ಒಂದು ಹಂತದಲ್ಲಿ 6 ರನ್ ಗೆ 2 ವಿಕೆಟ್ ಉದುರಿಸಿಕೊಂಡಿದ್ದ ಗುಜರಾತ್ ನಂತರದಲ್ಲಿ ಭಾರ್ಗವ್ ಮೆರೈ (74) ಮತ್ತು ರಂಜುಲ್ ಭಟ್ ಅಜೇಯವಾಗಿ 82 ರನ್ ಗಳಿಸಿ ಚೇತರಿಕೆ ನೀಡಿದರು. ಇವರಿಬ್ಬರ ಜೋಡಿ ಮುರಿಯಲು ವಿಫಲರಾದ ಕರ್ನಾಟಕ ವೇಗಿಗಳು ಸುಲಭವಾಗಿ ಪಡೆಯಬಹುದಾಗಿದ್ದ ಗೆಲುವನ್ನು ತಾವಾಗಿಯೇ ಕೈ ಚೆಲ್ಲಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ