ರಣಜಿ ಕ್ರಿಕೆಟ್: ಇಂದಿನಿಂದ ಕರ್ನಾಟಕಕ್ಕೆ ಬರೋಡಾ ಎದುರಾಳಿ

ಬುಧವಾರ, 12 ಫೆಬ್ರವರಿ 2020 (07:35 IST)
ಬೆಂಗಳೂರು: ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಕ್ವಾರ್ಟರ್ ಫೈನಲ್ ಹಂತಕ್ಕೇರಲು ಕರ್ನಾಟಕಕ್ಕೆ ಮತ್ತೊಂದು ಅವಕಾಶ ಸಿಕ್ಕಿದ್ದು, ಇಂದಿನಿಂದ ಬರೋಡಾ ವಿರುದ್ಧ ಪಂದ್ಯ ನಡೆಯಲಿದೆ.
 


ರಣಜಿ ಟ್ರೋಫಿ ಪಂದ್ಯದಲ್ಲಿ ಇಂದು ಕರ್ನಾಟಕ-ಬರೋಡಾ ನಡುವೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಕರ್ನಾಟಕಕ್ಕೆ ಗೆಲುವಿನ ನಿರೀಕ್ಷೆಯಿದೆ. ಕಳೆದ ಪಂದ್ಯದಲ್ಲಿ ಮಧ್ಯಪ್ರದೇಶ ವಿರುದ್ಧ ಮೂರು ಅಂಕ ಕಳೆದುಕೊಂಡು ಕ್ವಾರ್ಟರ್ ಫೈನಲ್ ಹಂತಕ್ಕೇರುವ ಅವಕಾಶ ಮಿಸ್ ಮಾಡಿಕೊಂಡಿತ್ತು. ಹೀಗಾಗಿ ಈ ಪಂದ್ಯ ಕರ್ನಾಟಕಕ್ಕೆ ಮಹತ್ವದ್ದಾಗಿರಲಿದೆ.

ಇನ್ನು, ಈ ಪಂದ್ಯಕ್ಕೆ ಕರ್ನಾಟಕ ತಂಡಕ್ಕೆ ರೋಹಿತ್ ಕದಮ್ ಸ್ಥಾನಕ್ಕೆ ದೇಗಾ ನಿಶ್ಚಲ್ ಗೆ ಸ್ಥಾನ ಕಲ್ಪಿಸಲಾಗಿದೆ. ಉಳಿದಂತೆ ಕರುಣ್ ನಾಯರ್, ದೇವದತ್ತ ಪಡಿಕ್ಕಲ್, ಪವನ್, ಶ್ರೇಯಾಸ್ ಗೋಪಾಲ್ ಮುಂತಾದವರು ಇರಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ