ನ್ಯೂಜಿಲೆಂಡ್ ನೆಲದಲ್ಲಿ ಕೆಎಲ್ ರಾಹುಲ್-ಮನೀಶ್ ಪಾಂಡೆ ಕನ್ನಡದ ಕಂಪು

ಮಂಗಳವಾರ, 11 ಫೆಬ್ರವರಿ 2020 (11:17 IST)
ಬೇ ಓವಲ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಎದುರಾಳಿಗೆ ಗೆಲ್ಲಲು 297 ರನ್ ಗಳ ಗುರಿ ನಿಗದಿಪಡಿಸಿದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಪಂದ್ಯದಲ್ಲಿ ಹೈಲೈಟ್ ಆಗಿದ್ದು ಕನ್ನಡಿಗರಾದ ಕೆಎಲ್ ರಾಹುಲ್ ಮತ್ತು ಮನೀಶ್ ಪಾಂಡೆ ಜತೆಯಾಟ.


ಕರ್ನಾಟಕ ಪರ ರಣಜಿ, ದೇಶೀಯ ಪಂದ್ಯಗಳಲ್ಲಿ ಜತೆಯಾಟವಾಡಿ ಚೆನ್ನಾಗಿ ಅನುಭವ ಹೊಂದಿರುವ ಈ ಇಬ್ಬರೂ ಕನ್ನಡಿಗರೂ ಇಂದು ಭಾರತದ ಇನಿಂಗ್ಸ್ ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದರು. ಕೆಳ ಕ್ರಮಾಂಕದಲ್ಲಿ ಉತ್ತಮ ಜತೆಯಾಟ ಬೇಕಾಗಿದ್ದ ರಾಹುಲ್-ಮನೀಶ್ ಜೋಡಿ ಶತಕದ ಜತೆಯಾಟವಾಡಿದರು. ವಿಶೇಷವೆಂದರೆ ಇಬ್ಬರೂ ರನ್ ಗಾಗಿ ಓಡಾಡುವಾಗ ಕನ್ನಡದಲ್ಲೇ ಸಂವಹನ ನಡೆಸುತ್ತಿದ್ದುದೂ ಕಂಡುಬಂತು.

ಕೆಎಲ್ ರಾಹುಲ್ ಭರ್ಜರಿ ಶತಕ (112) ಗಳಿಸಿಔಟಾದರೆ ಮರು ಎಸೆತದಲ್ಲೇ 42 ರನ್ ಗಳಿಸಿದ್ದ ಮನೀಶ್ ಪಾಂಡೆ ಕೂಡಾ ವಿಕೆಟ್ ಒಪ್ಪಿಸಿ ನಡೆದರು. ರಾಹುಲ್ ಈ ಮೂಲಕ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದು ನ್ಯೂಜಿಲೆಂಡ್ ನೆಲದಲ್ಲಿ ಶತಕ ಗಳಿಸಿದ ಭಾರತದ ಎರಡನೇ ಬ್ಯಾಟ್ಸ್ ಮನ್ ಎಂಬ ದಾಖಲೆ ಮಾಡಿದರು. ಉಳಿದಂತೆ ಶ್ರೇಯಸ್ ಐಯರ್ ಉಪಯುಕ್ತ 62, ಪೃಥ್ವಿ ಶಾ 40 ರನ್ ಗಳಿಸಿದರು. ಇದರೊಂದಿಗೆ ಭಾರತ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 296 ರನ್ ಗಳಿಸಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ