ಭಾರತ-ನ್ಯೂಜಿಲೆಂಡ್ ಏಕದಿನ: ಮತ್ತೆ ವಿರಾಟ್ ಕೊಹ್ಲಿ ವಿಫಲ

ಮಂಗಳವಾರ, 11 ಫೆಬ್ರವರಿ 2020 (09:19 IST)
ಬೇ ಓವಲ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಅಂತಿಮ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾ ಇತ್ತೀಚೆಗಿನ ವರದಿ ಬಂದಾಗ 3 ವಿಕೆಟ್ ಕಳೆದುಕೊಂಡು 127 ರನ್ ಗಳಿಸಿದೆ.

 
ಈ ಪಂದ್ಯದಲ್ಲೂ ಕೇವಲ 9 ರನ್ ಗೆ ವಿಕೆಟ್ ಒಪ್ಪಿಸುವ ಮೂಲಕ ರನ್ ಮೆಷಿನ್ ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ಮುಂದುವರಿಸಿದ್ದಾರೆ. ಈ ಮೂಲಕ ಸತತ ಮೂರು ಏಕದಿನ ಸರಣಿಗಳಿಂದ ಒಂದೇ ಒಂದು ಶತಕವೂ ಇಲ್ಲದೇ ಕಳಪೆ ಬ್ಯಾಟಿಂಗ್ ಸರಾಸರಿ ದಾಖಲಿಸಿದ್ದಾರೆ.

ರೋಹಿತ್ ಶರ್ಮಾ, ಶಿಖರ್ ಧವನ್ ಅನುಪಸ್ಥಿತಿಯಲ್ಲಿ ಕೊಹ್ಲಿ ಕೂಡಾ ಕೈಕೊಡುತ್ತಿರುವುದು ಟೀಂ ಇಂಡಿಯಾಕ್ಕೆ ದೊಡ್ಡ ಹೊಡೆತ ನೀಡಿದೆ. ಇದರಿಂದಾಗಿ ರನ್ ಗಳಿಕೆ ನಿರೀಕ್ಷಿಸಿದಂತೇ ಸಾಗುತ್ತಿಲ್ಲ. ಕೊಹ್ಲಿಯ ಈ ಕಳಪೆ ಫಾರ್ಮ್ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ