ಪಂಜಾಬ್ ತಂಡಕ್ಕೆ ಕೈಕೊಟ್ಟ ಕೆಎಲ್ ರಾಹುಲ್ ಬಗ್ಗೆ ಕೋಚ್ ಅನಿಲ್ ಕುಂಬ್ಳೆ ಹೇಳಿದ್ದೇನು?
ಈ ಬಗ್ಗೆ ಕೋಚ್ ಅನಿಲ್ ಕುಂಬ್ಳೆ ಪ್ರತಿಕ್ರಿಯಿಸಿದ್ದಾರೆ. ಕಿಂಗ್ಸ್ ಪಂಜಾಬ್ ಫ್ರಾಂಚೈಸಿ ರಾಹುಲ್ ಮತ್ತೆ ಹರಾಜಿಗೊಳಗಾಗಲು ನಿರ್ಧರಿಸಿರುವುದನ್ನು ಗೌರವಿಸುತ್ತದೆ. ಅವರನ್ನು ಕಳೆದುಕೊಳ್ಳುವುದು ನಮಗೆ ಇಷ್ಟವಿರಲಿಲ್ಲ. ಅದಕ್ಕಾಗಿಯೇ ಅವರನ್ನು ಎರಡು ವರ್ಷ ನಾಯಕನಾಗಿ ನೇಮಿಸಿದೆವು. ಆದರೆ ಅವರು ಹರಾಜಿಗೊಳಗಾಗಲು ನಿರ್ಧರಿಸಿದರು. ಅದನ್ನು ಗೌರವಿಸುತ್ತೇವೆ ಎಂದಿದ್ದಾರೆ.
ಇನ್ನು, ಪಂಜಾಬ್ ಮುಂದಿನ ನಾಯಕ ಮಯಾಂಕ್ ಅಗರ್ವಾಲ್ ಆಗಬಹುದು ಎಂಬ ಸುಳಿವನ್ನು ಕುಂಬ್ಳೆ ನೀಡಿದ್ದಾರೆ. 14 ಕೋಟಿ ರೂ.ಗೆ ಪಂಜಾಬ್ ಮಯಾಂಕ್ ರನ್ನು ಖರೀದಿಸಿತ್ತು. ಅವರನ್ನೀಗ ತಂಡದಲ್ಲೇ ಉಳಿಸಿಕೊಂಡಿದೆ. ಹೀಗಾಗಿ ಮುಂದಿನ ನಾಯಕ ಮತ್ತೊಬ್ಬ ಕನ್ನಡಿಗನೇ ಆಗುವುದು ವಿಶೇಷ.