ರವಿ ಬಿಷ್ಣೋಯ್ ಟಿ20 ನಂ.1 ಬೌಲರ್
ಇತ್ತೀಚೆಗೆ ಬಿಡುಗಡೆಯಾದ ಐಸಿಸಿ ಶ್ರೇಯಾಂಕದಲ್ಲಿ ಬೌಲರ್ ಗಳ ಪಟ್ಟಿಯಲ್ಲಿ ರವಿ ಬಿಷ್ಣೋಯ್ 699 ಅಂಕಗಳೊಂದಿಗೆ ನಂ.1 ಸ್ಥಾನಕ್ಕೇರಿದ್ದಾರೆ. ಅಫ್ಘಾನಿಸ್ತಾನದ ರಶೀದ್ ಖಾನ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಅಗ್ರ ಎರಡೂ ಸ್ಥಾನಗಳಲ್ಲಿ ಸ್ಪಿನ್ನರ್ ಗಳೇ ಇರುವುದು ವಿಶೇಷ.
ಸೂರ್ಯಕುಮಾರ್ ಯಾದವ್ ಟಿ20 ನಂ.1 ಬ್ಯಾಟರ್ ಆಗಿದ್ದಾರೆ. 855 ಅಂಕ ಪಡೆದಿರುವ ಸೂರ್ಯ ನಂ.1 ಬ್ಯಾಟರ್. ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯಲ್ಲಿ ಸೂರ್ಯ ನಾಯಕತ್ವ ವಹಿಸಿದ್ದಲ್ಲದೆ, ಬ್ಯಾಟಿಂಗ್ ನಲ್ಲೂ ಮಿಂಚಿದ್ದರು.
ಆಲ್ ರೌಂಡರ್ ಗಳ ಪಟ್ಟಿಯಲ್ಲಿ ಶಕೀಬ್ ಅಲ್ ಹಸನ್ ನಂ. 1 ಸ್ಥಾನದಲ್ಲಿದ್ದಾರೆ. ಭಾರತೀಯ ಆಟಗಾರರ ಪೈಕಿ ಹಾರ್ದಿಕ್ ಪಾಂಡ್ಯ 3 ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.