ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸುವ ಬಗ್ಗೆ ರವಿಶಾಸ್ತ್ರಿ ಕೊಟ್ಟ ದೊಡ್ಡ ಸುಳಿವು
ಕೊಹ್ಲಿ ಮುಂದಿನ ದಿನಗಳಲ್ಲಿ ಏಕದಿನ ಮತ್ತು ಟೆಸ್ಟ್ ನಾಯಕತ್ವವನ್ನೂ ತ್ಯಜಿಸಬಹುದು. ಕೇವಲ ತಮ್ಮ ಬ್ಯಾಟಿಂಗ್ ಬಗ್ಗೆ ಗಮನ ಕೊಡಬಹುದು ಎಂದು ಶಾಸ್ತ್ರಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಅವರು ಟೆಸ್ಟ್ ನಾಯಕತ್ವವನ್ನು ತಕ್ಷಣವೇ ತ್ಯಜಿಸಬಹುದು ಎಂದು ಹೇಳಲಾಗದು. ಆದರೆ ಸದ್ಯದಲ್ಲೇ ಅವರು ಮಾನಸಿಕವಾಗಿ ಬಳಲಿದಾಗ ತಮ್ಮ ಬ್ಯಾಟಿಂಗ್ ಸುಧಾರಿಸಲು ಈ ನಿರ್ಧಾರಕ್ಕೆ ಬರಬಹುದು ಎಂದು ಶಾಸ್ತ್ರಿ ಹೇಳಿದ್ದಾರೆ.