ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿಗೆ ಇಷ್ಟೊಂದು ವೇತನ?!

ಮಂಗಳವಾರ, 10 ಸೆಪ್ಟಂಬರ್ 2019 (09:16 IST)
ಮುಂಬೈ: ಟೀಂ ಇಂಡಿಯಾ ಕೋಚ್ ಆಗಿ ಪುನರಾಯ್ಕೆಗೊಂಡ ರವಿಶಾಸ್ತ್ರಿಗೆ ಈಗ ವೇತನ ವಿಚಾರದಲ್ಲೂ ಬಂಪರ್ ಹೊಡೆಯುವ ನಿರೀಕ್ಷೆಯಿದೆ. ಅಂದರೆ ಕೋಚ್ ರವಿಶಾಸ್ತ್ರಿ ವೇತನ ಹೆಚ್ಚಳವಾಗುವ ಸಾಧ್ಯತೆಯಿದೆ.

 

ಮೂಲಗಳ ಪ್ರಕಾರ ರವಿಶಾಸ್ತ್ರಿ ವೇತನದಲ್ಲಿ ಶೇ.20 ರಷ್ಟು ಹೆಚ್ಚಳವಾಗಲಿದೆ. ಸದ್ಯಕ್ಕೆ ಶಾಸ್ತ್ರಿ 8 ಕೋಟಿ ರೂ. ವೇತನ ಪಡೆಯುತ್ತಿದ್ದಾರೆ. ಆದರೆ ಇನ್ನು ಮುಂದೆ ಇದರಲ್ಲಿ ಶೇ.20 ರಷ್ಟು ಹೆಚ್ಚಳವಾಗಿ 9.5 ಅಥವಾ 10 ಕೋಟಿ ರೂ. ಆಗುವ ಸಾಧ್ಯತೆಯಿದೆ.

ಕೇವಲ ರವಿಶಾಸ್ತ್ರಿ ಮಾತ್ರವಲ್ಲ, ಬೌಲಿಂಗ್ ಕೋಚ್ ಆಗಿ ಆಯ್ಕೆಯಾದ ಭರತ್ ಅರುಣ್ ಮತ್ತು ಫೀಲ್ಡಿಂಗ್ ಕೋಚ್ ಆಗಿ ಆಯ್ಕೆಯಾದ ಆರ್ ಶ್ರೀಧರ್ ವೇತನದಲ್ಲೂ ಹೆಚ್ಚಳವಾಗುವ ಸಾಧ್ಯತೆಯಿದೆ. ಇದು ಸೆಪ್ಟೆಂಬರ್ 1 ರಿಂದಲೇ ಜಾರಿಯಾಗುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ