ತಮ್ಮ ಯಶಸ್ಸಿನ ಗುಟ್ಟು ಬಿಟ್ಟುಕೊಟ್ಟ ರವಿಚಂದ್ರನ್ ಅಶ್ವಿನ್

ಮಂಗಳವಾರ, 7 ಆಗಸ್ಟ್ 2018 (09:31 IST)
ಲಂಡನ್: ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಸೋತರೂ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಗೆ ಸಿಕ್ಕಿದ ಯಶಸ್ಸು ಎಲ್ಲರನ್ನೂ ದಂಗುಬಡಿಸಿದೆ. ಇದೀಗ ತಮ್ಮ ಯಶಸ್ಸಿನ ಗುಟ್ಟೇನೆಂದು ಅಶ್ವಿನ್ ಹೇಳಿಕೊಂಡಿದ್ದಾರೆ.
 

ಕುಲದೀಪ್ ಯಾದವ್ ಬಂದ ನಂತರ ಅಶ್ವಿನ್ ಮೂಲೆಗುಂಪಾದರು ಎಂದೇ ಹೇಳಲಾಗುತ್ತಿತ್ತು. ಅದೇ ಸಂದರ್ಭದಲ್ಲಿ ಅಶ್ವಿನ್ ಇಂಗ್ಲೆಂಡ್ ಪಿಚ್ ನಲ್ಲಿ ವೇಗಿಗಳಿಗಿಂತಲೂ ಹೆಚ್ಚು ವಿಕೆಟ್ ಪಡೆದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಅದರಲ್ಲೂ ವಿಶೇಷವಾಗಿ ಅಲೆಸ್ಟರ್ ಕುಕ್ ರನ್ನು ಬರೋಬ್ಬರಿ 9 ಬಾರಿ ಔಟ್ ಮಾಡಿದ ದಾಖಲೆಯನ್ನೂ ಮಾಡಿದ್ದಾರೆ.

ಇದೀಗ ತಮ್ಮ ಈ ಯಶಸ್ಸಿಗೆ ಕಳೆದ ಬಾರಿ ವಾರ್ಕ್ ಶೈರ್ ಕೌಂಟಿ ಕ್ರಿಕೆಟ್ ನಲ್ಲಿ ಆಡಿದ್ದೇ ಕಾರಣ ಎಂದು ಅಶ್ವಿನ್ ಹೇಳಿಕೊಂಡಿದ್ದಾರೆ. ಕೌಂಟಿ ಕ್ರಿಕೆಟ್ ನಲ್ಲಿ ಡ್ಯೂಕ್ ಬಳಸುವುದು ಹೇಗೆಂದು ಅಭ್ಯಾಸ ಮಾಡಿಕೊಂಡೆ. ಇಲ್ಲಿ ಬ್ಯಾಟ್ಸ್ ಮನ್ ಹೇಗೆ ಆಡುತ್ತಾನೆ, ಆಲೋಚನೆ ಏನಿರುತ್ತದೆ ಎಂದು ಹಲವು ವಿಚಾರಗಳನ್ನು ಕೌಂಟಿಯಲ್ಲಿ ಕಲಿತುಕೊಂಡೆ. ಅದೀಗ ಸಹಾಯಕ್ಕೆ ಬಂದಿದೆ ಎಂದು ಅಶ್ವಿನ್ ಬಹಿರಂಗಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ