ನಂ.1 ಆದ ಆಲ್ ರೌಂಡರ್ ರವೀಂದ್ರ ಜಡೇಜಾ
ಶ್ರೀಲಂಕಾ ವಿರುದ್ಧ ಮೊಹಾಲಿ ಟೆಸ್ಟ್ ನಲ್ಲಿ ಅಜೇಯ 175 ರನ್ ಮತ್ತು 9 ವಿಕೆಟ್ ಕಬಳಿಸಿದ್ದ ಜಡೇಜಾ ಜೇಸನ್ ಹೋಲ್ಡರ್ ರನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ್ದಾರೆ. ಆದರೆ ಇನ್ನೊಬ್ಬ ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ ಅರ್ಧಶತಕ, ಬೌಲಿಂಗ್ ನಲ್ಲಿ 6 ವಿಕೆಟ್ ಕಬಳಿಸಿಯೂ ಒಂದು ಸ್ಥಾನಕ್ಕೆ ಕೆಳಕ್ಕಿಳಿದಿದ್ದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಇನ್ನು ಬ್ಯಾಟರ್ ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಎರಡು ಸ್ಥಾನ ಮೇಲಕ್ಕೇರಿ ಐದನೇ ಸ್ಥಾನದಲ್ಲಿದ್ದು, ರಿಷಬ್ ಪಂತ್ ಟಾಪ್ 10 ರೊಳಗೆ ಸ್ಥಾನ ಪಡೆದಿದ್ದಾರೆ. ಆದರೆ ನಾಯಕ ರೋಹಿತ್ ಶರ್ಮಾ ರನ್ ಗಳಿಸುವಲ್ಲಿ ವಿಫಲರಾದ ಕಾರಣ 6 ನೇ ಸ್ಥಾನಕ್ಕೆ ಕುಸಿದಿದ್ದಾರೆ.