3ನೇ ಟೆಸ್ಟ್ ಪಂದ್ಯದಿಂದ ಜಡೇಜಾ ಅಮಾನತು: ಐಸಿಸಿ ಆದೇಶ

ಭಾನುವಾರ, 6 ಆಗಸ್ಟ್ 2017 (18:22 IST)
2ನೇ ಟೆಸ್ಟ್ ಪಂದ್ಯದಲ್ಲಿ 7 ವಿಕೆಟ್ ಜೊತೆ ಅಜೇಯ 70 ರನ್ ಸಿಡಿಸಿ ತಂಡದ ಗೆಲುವಿಗೆ ಕಾರಣರಾದ ಆಲ್ರೌಂಡರ್ ರವೀಂದ್ರ ಜಡೇಜಾರನ್ನ 3ನೇ ಟೆಸ್ಟ್ ಪಂದ್ಯದಿಂದ ಅಮಾನತು ಮಾಡಲಾಗಿದೆ.

ಐಸಿಸಿ ನಿಯಮ ಉಲ್ಲಂಘಿಸಿದ ಆರೋಪದಡಿ ಜಡೇಜಾಗೆ ಪಂದ್ಯದ ಶೇ.50ರಷ್ಟು ಸಂಭಾವನೆಯ ದಂಡ ಮತ್ತು 3ನೇ ಟೆಸ್ಟ್ ಪಂದ್ಯದಿಂದ ಅಮಾನತಿನ ಶಿಕ್ಷೆ ವಿಧಿಸಲಾಗಿದೆ.

ತನ್ನದೇ ಬೌಲಿಂಗ್`ನಲ್ಲಿ ಬ್ಯಾಟ್ಸ್`ಮನ್ ಹೊಡೆದ ಬಾಲನ್ನ ಹಿಡಿದ ರವೀಂದ್ರ ಜಡೇಜಾ ರಭಸವಾಗಿ ಚೆಂಡನ್ನ ಬ್ಯಾಟ್ಸ್`ಮನ್ ದಿಮುತ್ ಕರುಣರತ್ನೆ ಕಡೆ ಅಪಘಾತಕಾರಿ ಶೈಲಿಯಲ್ಲಿ ಎಸೆದಿದ್ದರು ಎಂಬುದು ಆನ್`ಫೀಲ್ಡ್ ಅಂಪೈರ್`ಗಳಾದ ರೋಡ್ ತುಖಾರ್ ಮತ್ತು  ಬ್ರೂಸ್ ಒಕ್ಸೆನ್ ಫೋರ್ಡ್ ದೂರು ನೀಡಿದ್ದರು. ಇದು ಆಟಗಾರರ ನೀತಿ ಸಂಹಿತೆ 2.28ರ ಉಲ್ಲಂಘನೆಯಾಗಿದೆ.

ರವೀಂದ್ರ ಜಡೇಜಾ ಸಹ ರೆಫರಿ ರಿಚಿ ರಿಚರ್ಡ್ ಸನ್ ನೀಡಿದ ತೀರ್ಪನ್ನ ಒಪ್ಪಿಕೊಂಡಿದ್ದಾರೆ ಎನ್ನಲಾಗಿದ್ದು, ಪಂದ್ಯದ ಶೇ. 50ರಷ್ಟು ದಂಡದ ಜೊತೆ ಆಗಸ್ಟ್ 12ರಂದು ನಡೆಯಲಿರುವ ಅಂತಿಮ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ