ಟ್ರೋಫಿ ಗೆಲ್ಲದಿದ್ದರೇನಂತೆ ಸೋಷಿಯಲ್ ಮೀಡಿಯಾದಲ್ಲಿ ಚೆನ್ನೈಗಿಂತಲೂ ಆರ್ ಸಿಬಿಯೇ ಮುಂದು

Sampriya

ಮಂಗಳವಾರ, 1 ಏಪ್ರಿಲ್ 2025 (19:13 IST)
Photo Courtesy X
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡವೆಂದರೆ ಆರ್‌ಸಿಬಿ, ಚೆನ್ನೈ, ಹಾಗೂ ಮುಂಬೈ ಇಂಡಿಯನ್ಸ್‌. 17 ಆವೃತ್ತಿಗಳಲ್ಲಿ ಆರ್‌ಸಿಬಿ ಒಂದು ಟ್ರೋಫಿ ಗೆಲ್ಲದಿದ್ದರೂ ಮಾತ್ರ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಒಂದು ಪ್ರಶಸ್ತಿಯನ್ನು ಗೆಲ್ಲದ ಆರ್‌ಸಿಬಿ, ಇದೀಗ ಚೆನ್ನೈ ಸೂಪರ್  ಕಿಂಗ್ಸ್‌ ಅನ್ನು ಹಿಂದಿಕ್ಕಿ ಇನ್‌ಸ್ಟಾಗ್ರಾಂನಲ್ಲಿ ಅತೀ ಹೆಚ್ಚು ಫಾಲೋವರ್‌ಗಳನ್ನು ಹೊಂದಿದೆ. ಈ ಮೂಲಕ  ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತೀ ಹೆಚ್ಚು ಫಾಲೋವರ್ಸ್‌ಗಳೊಂದಿಗೆ ಆರ್‌ಸಿಬಿ ಹೊಸ ಮೈಲಿಗಲ್ಲು ಸಾಧಿಸಿದೆ.

RCB ತಂಡವು ತನ್ನದೇ ಆದ ಅಂಗಳದಲ್ಲಿ CSK ವಿರುದ್ಧ 50 ರನ್‌ಗಳಿಂದ ಜಯಗಳಿಸಿ, 17 ವರ್ಷಗಳಲ್ಲಿ ಹೊಸ ಇತಿಹಾಸವನ್ನು ಬರೆಯಿತು. ಆರ್‌ಸಿಬಿ ಕೊನೆಯ ಬಾರಿಗೆ ಚೆನ್ನೈನಲ್ಲಿ CSK ಅನ್ನು ಸೋಲಿಸಿದ್ದು 2008 ರಲ್ಲಿ. ಆ ಗೆಲುವಿನ ನಂತರ, RCB ಸತತ 8 ಪಂದ್ಯಗಳನ್ನು CSK ವಿರುದ್ಧ ಸೋತಿತು. RCB ಈಗ ತನ್ನ ಕ್ಯಾಪ್‌ನಲ್ಲಿ ಮತ್ತೊಂದು ಗರಿಯನ್ನು ಸೇರಿಸಿಕೊಂಡಿದೆ, ತಮ್ಮ ಸಾಮಾಜಿಕ ಮಾಧ್ಯಮ ಪ್ರಾಬಲ್ಯವನ್ನು ಗಟ್ಟಿಗೊಳಿಸಿದೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಾಕ್‌ ಹಾಗೂ ಭಾರತದಂತಿರುವ ಆರ್‌ಸಿಬಿ ಹಾಗೂ ಸಿಎಸ್‌ಕೆ ಮಧ್ಯೆ ಎಲ್ಲ ವಿಚಾರದಲ್ಲೂ ಪೈಪೋಟಿಗಳು ಜೋರಾಗಿಯೇ ನಡೆಯುತ್ತಿರುತ್ತದೆ. ಇದೀಗ ಸಿಎಸ್‌ಕೆ ಪಾಲೋವರ್ಸ್‌ ಅನ್ನು ಆರ್‌ಸಿಬಿ ಮೀರಿಸಿದೆ. ಇದು ಆರ್‌ಸಿಬಿ ಅಭಿಮಾನಿಗಳಿಗೆ ಹೆಮ್ಮೆ ತಂದಿದೆ.  

ಐಪಿಎಲ್ ತಂಡಗಳ ಇನ್‌ಸ್ಟಾಗ್ರಾಮ್ ಅನುಯಾಯಿಗಳು:
ರಾಯಲ್ ಚಾಲೆಂಜರ್ಸ್ ಬೆಂಗಳೂರು - 17.8 ಮಿಲಿಯನ್
ಚೆನ್ನೈ ಸೂಪರ್ ಕಿಂಗ್ಸ್ - 17.7 ಮಿಲಿಯನ್
ಮುಂಬೈ ಇಂಡಿಯನ್ಸ್ - 16.2 ಮಿಲಿಯನ್
ಕೋಲ್ಕತ್ತಾ ನೈಟ್ ರೈಡರ್ಸ್ - 7 ಮಿಲಿಯನ್
ಸನ್‌ರೈಸರ್ಸ್ ಹೈದರಾಬಾದ್ - 5.1 ಮಿಲಿಯನ್
ರಾಜಸ್ಥಾನ್ ರಾಯಲ್ಸ್ - 4.7 ಮಿಲಿಯನ್
ಗುಜರಾತ್ ಟೈಟಾನ್ಸ್ - 4.5 ಮಿಲಿಯನ್
ದೆಹಲಿ ಕ್ಯಾಪಿಟಲ್ಸ್ - 4.3 ಮಿಲಿಯನ್
ಪಂಜಾಬ್ ಕಿಂಗ್ಸ್ - 3.7 ಮಿಲಿಯನ್
ಲಕ್ನೋ ಸೂಪರ್ ಜೈಂಟ್ಸ್ - 3.5 ಮಿಲಿಯನ್

ಪ್ರಸ್ತುತ, ಆರ್‌ಸಿಬಿ 4 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಕೂಡ 4 ಅಂಕಗಳನ್ನು ಹೊಂದಿದೆ ಆದರೆ ಅವರ ಎನ್‌ಆರ್‌ಆರ್ ಆರ್‌ಸಿಬಿಗಿಂತ ಕಡಿಮೆಯಾಗಿದೆ. ಇನ್ನೂ ನಾಳೆ ತವರು ನೆಲದಲ್ಲಿ ರಜತ್ ಪಾಟಿದಾರ್ ಆರ್‌ಸಿಬಿ ಪಡೆ ಗುಜರಾತ್ ಟೈಟನ್ಸ್‌ ಅನ್ನು ಎದುರಿಸಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ