Virat Kohli: ಬಿಗ್ ಬಾಶ್ ಲೀಗ್ ನಲ್ಲಿ ವಿರಾಟ್ ಕೊಹ್ಲಿ, ಅಸಲಿಯತ್ತೇನು ನೋಡಿ
ಬಿಸಿಸಿಐ ಗುತ್ತಿಗೆ ಪಡೆದಿರುವ ಯಾವ ಆಟಗಾರರೂ ವಿದೇಶೀ ಕ್ರಿಕೆಟ್ ಲೀಗ್ ನಲ್ಲಿ ಭಾಗವಹಿಸುವಂತಿಲ್ಲ ಎಂಬ ನಿಯಮವನ್ನು ಬಿಸಿಸಿಐ ಮಾಡಿದೆ. ಅದರಂತೆ ಟೀಂ ಇಂಡಿಯಾದ ಹಾಲಿ ಆಟಗಾರರಿಗೆ ವಿದೇಶೀ ಲೀಗ್ ಕ್ರಿಕೆಟ್ ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲ್ಲ. ನಿವೃತ್ತ ಕ್ರಿಕೆಟಿಗರೂ ವಿದೇಶೀ ಲೀಗ್ ನಲ್ಲಿ ಆಡುವ ಮೊದಲು ಬಿಸಿಸಿಐನಿಂದ ಅನುಮತಿ ಪಡೆಯಬೇಕು.
ಆದರೆ ಇದೀಗ ಬಿಗ್ ಬಾಶ್ ಲೀಗ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮುಂದಿನ ಎರಡು ಸೀಸನ್ ಗಳಿಗೆ ವಿರಾಟ್ ಕೊಹ್ಲಿ ಬಿಗ್ ಬಾಶ್ ಲೀಗ್ ನ ಭಾಗವಾಗಲಿದ್ದಾರೆ ಎಂದು ಪ್ರಕಟಣೆ ನೀಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಆದರೆ ಇದು ನಿಜ ಸುದ್ದಿಯಲ್ಲ. ಇಂದು ಏಪ್ರಿಲ್ ಫೂಲ್ ಡೇ ಆಗಿದೆ. ಈ ಕಾರಣಕ್ಕೆ ಬಿಗ್ ಬಾಶ್ ಇಂತಹದ್ದೊಂದು ತಮಾಷೆ ಮಾಡಿದೆ. ಆದರೆ ತಮಾಷೆಯೇ ಆಗಿದ್ದರೂ ಕೊಹ್ಲಿ ಬಿಗ್ ಬಾಶ್ ಆಡುತ್ತಾರೆ ಎಂಬ ಸುದ್ದಿ ಎಲ್ಲರನ್ನೂ ಅರೆಕ್ಷಣ ದಂಗಾಗಿಸಿದ್ದಂತೂ ನಿಜ.