Virat Kohli: ಭಾರತೀಯ ಸೇನೆಯ ಸುದ್ದಿಗೋಷ್ಠಿಯಲ್ಲೂ ವಿರಾಟ್ ಕೊಹ್ಲಿಯದ್ದೇ ಹವಾ
ಇಂದು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಭಾರತೀಯ ಸೇನೆಯ ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಸುದ್ದಿಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ನಿವೃತ್ತಿಯ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಪತ್ರಿಕಾಗೋಷ್ಠಿಯ ಆರಂಭದಲ್ಲೇ ‘ಇಂದು ನಾವು ಕ್ರಿಕೆಟ್ ಬಗ್ಗೆ ಮಾತನಾಡಬಹುದು. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತರಾಗಿದ್ದಾರೆ. ಎಲ್ಲರಂತೆ ನನಗೂ ಕೊಹ್ಲಿ ಮೆಚ್ಚಿನ ಆಟಗಾರ. ನಾವೂ ಕೂಡಾ ಕೊಹ್ಲಿಯಂತೆ ಪಾಕಿಸ್ತಾನದ ದಾಳಿಯನ್ನು ಪುಡಿಗಟ್ಟಿದ್ದೇವೆ’ ಎಂದಿದ್ದಾರೆ.
ಅವರ ಈ ಕ್ರಿಕೆಟ್ ಹೋಲಿಕೆ ಎಲ್ಲರ ಮುಖದಲ್ಲಿ ನಗು ತರಿಸಿದೆ. ಕ್ರಿಕೆಟ್ ನಲ್ಲಿರುವಂತೆ ನಾವೂ ಪಾಕಿಸ್ತಾನದ ಎಲ್ಲಾ ದಾಳಿಯನ್ನು ಒಬ್ಬರಲ್ಲದಿದ್ದರೆ ಇನ್ನೊಬ್ಬರು ಸಮರ್ಥವಾಗಿ ಎದರುಸಿದ್ದೇವೆ ಎಂದಿದ್ದಾರೆ.