(VIDEO) ಕಿರಿಕ್ ಮಾಡುತ್ತಿದ್ದ ಬಾಂಗ್ಲಾ ಬೌಲರ್`ಗೆ ಧೋನಿ ಕೊಟ್ಟ ಶಾಕ್ ನೆನಪಿದೆಯಾ..?
ಗುರುವಾರ, 15 ಜೂನ್ 2017 (11:12 IST)
ಇವತ್ತಿಗೆ ಹತ್ತಿರತ್ತರಿ 2 ವರ್ಷ ಕಳೆದಿದೆ. ಬಾಂಗ್ಲಾದೇಶ ಮತ್ತು ಟೀಮ್ ಇಂಡಿಯಾ ಮೀರ್ ಪುರ್ ಏಕದಿನ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಬಾಂಗ್ಲಾದೇಶದ ಬೌಲರ್ ಮುಸ್ತಫಿಜೂರ್ ಬೇಕಂತಲೇ ಣಭಾರತದ ಬ್ಯಾಟ್ಸ್`ಮನ್`ಗಳಿಗೆ ತೊಂದರೆ ಕೊಡುತ್ತಿದ್ದ.
ರನ್ ಓಡುವ ಸಂದರ್ಭ ಮುಸ್ತಫಿಜೂರ್ ಅಡ್ಡ ಬರುತ್ತಿದ್ದ. ರೋಹಿತ್ ಶರ್ಮಾಗೆ ರನ್ ಓಡುವಾಗ ತೊಂದರೆ ಕೊಟ್ಟಿದ್ದ ಮುಸ್ತಫಿಜೂರ್, ಧೋನಿಗೂ ಅದೇ ಕೆಲಸ ಮಾಡಲು ಯತ್ನಿಸಿದ್ದ. ಮುಸ್ತಫಿಜೂರ್ ಚೇಷ್ಟೆಯನ್ನ ಗಮನಿಸಿದ್ದ ಎಂ.ಎಸ್. ಧೋನಿ ರನ್ ಓಡುವಾಗ ಅಡ್ಡ ಬಂದ ಮುಸ್ತಫಿಜೂರ್`ನನ್ನ ಪಕ್ಕಕ್ಕೆ ನೂಕಿ ತೆರಳಿದರು.
25ನೇ ಓವರ್`ನಲ್ಲಿ ಮುಸ್ತಫಿಜೂರ್ ಎಸೆದ ಚೆಂಡನ್ನ ಮಿಡ್ ಆಫ್ ಕಡೆಗೆ ಹೊಡೆದ ಧೋನಿ ಓಡಲು ಮುಂದಾದಾಗ ಮುಸ್ತಫಿಜೂರ್ ಏನೂ ಗೊತ್ತಿಲ್ಲದವನಂತೆ ಅಡ್ಡ ಬಂದಿದ್ದ. ಕೂಲ್ ಕೂಲ್ ಧೋನಿಗೆ ಊತನ ಆಟ ಕಂಡು ಪಿತ್ತ ನೆತ್ತಿಗೇರಿತ್ತು. ಪಕ್ಕಕ್ಕೆ ತಳ್ಳಿ ರನ್ ಓಡಿದರು.
ಬಾಂಗ್ಲಾದೇಶಿಯರು ಟೀಮ್ ಇಂಡಿಯಾ ವಿರುದ್ಧ ಪಂದ್ಯವೆಂದರೆ ಇನ್ನಿಲ್ಲದಂತೆ ಡ್ರಾಮಾ ಮಾಡುತ್ತಾರೆ. ಆಟಗಾರರನನ್ನ ಕೆಣಕುತ್ತಾರೆ. ಪಾಕಿಸ್ತಾನ ರೀತಿಯೇ ನಮಗೂ ಭಾರತದ ಜೊತೆ ವೈರತ್ವ ಬೇಕು ಎಂಬಂತೆ ವರ್ತಿಸುತ್ತಾರೆ. ಏನೆಲ್ಲ ಮಾಡಿದರೂ ಭಾರತದ ವಿರುದ್ಧ ಬಾಂಗ್ಲಾದೇಶಿಯರ ಸಕ್ಸಸ್ ರೇಟ್ ತುಂಬಾ ಕಡಿಮೆ. ಈ ಹಿಂದೆ ಲಘುವಾಗಿ ಪರಿಗಣಿಸಿ ಕೆಲ ಪಂದ್ಯಗಳಲ್ಲಿ ಭಾರತ ಸೋತಿದ್ದಿದೆ. ಆದರೆ, ಈಗ ಆ ಚಾನ್ಸ್ ಇಲ್ಲ. ಇವತ್ತಿನ ಸೆಮಿಫೈನಲ್ ಪಂದ್ಯದಲ್ಲಿ ಭಾರತವೇ ಗೆಲ್ಲುವ ಫೇವರೀಟ್ ತಂಡ.