ಕ್ರಿಕೆಟಿಗ ರಿಯಾನ್ ಪರಾಗ್ ಯೂ ಟ್ಯೂಬ್ ಸರ್ಚ್ ಲಿಸ್ಟ್ ಸಖತ್ ಹಾಟ್ ಮಗಾ

Krishnaveni K

ಮಂಗಳವಾರ, 28 ಮೇ 2024 (14:42 IST)
Photo Credit: X
ಮುಂಬೈ: ರಾಜಸ್ಥಾನ್ ರಾಯಲ್ಸ್ ಪರ ಐಪಿಎಲ್ ಆಡುವ ಪ್ರತಿಭಾವಂತ ಕ್ರಿಕೆಟಿಗ ರಿಯಾನ್ ಪರಾಗ್ ಅವರ ಯೂ ಟ್ಯೂಬ್ ಸರ್ಚ್ ಲಿಸ್ಟ್ ಬಹಿರಂಗವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರಿಯಾನ್ ಪರಾಗ್ ತಮ್ಮ ಯೂ ಟ್ಯೂಬ್ ನಲ್ಲಿ ಬಾಲಿವುಡ್ ತಾರೆಯರಾದ ಸಾರಾ ಅಲಿ ಖಾನ್ ಮತ್ತು ಅನನ್ಯಾ ಪಾಂಡೆಯವರ ಹಾಟ್ ದೃಶ್ಯಗಳನ್ನು ಸರ್ಚ್ ಮಾಡಿರುವುದು ಬಹಿರಂಗವಾಗಿದೆ. ಅವರ ಯೂ ಟ್ಯೂಬ್ ಸರ್ಚ್ ಲಿಸ್ಟ್ ನಲ್ಲಿ ಈ ಇಬ್ಬರು ನಟಿಯರ ಹೆಸರುಗಳು ಕಂಡುಬಂದಿವೆ.

22 ವರ್ಷದ ರಿಯಾನ್ ಪರಾಗ್ ಯೂ ಟ್ಯೂಬ್ ನಲ್ಲಿ ಲೈವ್ ಸ್ಟ್ರೀಮ್ ಮಾಡಿದ್ದರು.  ಈ ವೇಳೆ ಅವರು ತಮ್ಮ ಸರ್ಚ್ ಹಿಸ್ಟರಿ ಡಿಲೀಟ್ ಮಾಡಿರಲಿಲ್ಲ. ಹೀಗಾಗಿ ಅವರ ಸರ್ಚ್ ಲಿಸ್ಟ್ ನ ಹಿನ್ನಲೆ ಬಹಿರಂಗವಾಗಿದೆ.

ಸರ್ಚ್ ಹಿಸ್ಟರಿಯಲ್ಲಿ ಸಾರಾ, ಅನನ್ಯಾ ಅವರ ಹಾಟ್ ವಿಡಿಯೋಗಳನ್ನು ನೋಡಿದ್ದು ಕಂಡುಬಂದ ಬೆನ್ನಲ್ಲೇ ರಿಯಾನ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ರೋಲ್ ಗೊಳಗಾಗಿದ್ದಾರೆ. ಇತ್ತೀಚೆಗೆ ಐಪಿಎಲ್ ನಲ್ಲಿ ಬ್ಯಾಟಿಂಗ್ ನ ಮೂಲಕ ಸುದ್ದಿಯಾಗಿದ್ದ ರಿಯಾನ್ ಪರಾಗ್ ಈಗ ಹಾಟ್ ನಟಿಯರನ್ನು ನೋಡಿ ಟ್ರೋಲ್ ಆಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ