ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ಪತ್ನಿ ನತಾಶಾ ಬ್ರೇಕಪ್ ಸುದ್ದಿಗಳ ನಡುವೆಯೇ ಸೋಷಿಯಲ್ ಮೀಡಿಯಾದಲ್ಲಿ ಹೊಸ ಹೊಸ ಟ್ರೋಲ್ ಗಳು ಸೃಷ್ಟಿಯಾಗಿವೆ.
ಹಾರ್ದಿಕ್ ಪಾಂಡ್ಯ ಒಂದು ವೇಳೆ ತಮ್ಮ ಪತ್ನಿ ನತಾಶಾಗೆ ವಿಚ್ಛೇದನ ನೀಡಿದರೆ ಅವರ ಶೇ.70 ರಷ್ಟು ಆಸ್ತಿಯನ್ನು ಪತ್ನಿಗೆ ನೀಡಬೇಕಾಗುತ್ತದೆ ಎಂದು ವರದಿಯಾಗಿತ್ತು. ಇದರ ಬೆನ್ನಲ್ಲೇ ಹಾರ್ದಿಕ್ ತಮ್ಮೆಲ್ಲಾ ಆಸ್ತಿ, ಕಾರು, ಬಂಗಲೆಯನ್ನು ಅಮ್ಮನ ಹೆಸರಿಗೆ ಮೊದಲೇ ಮಾಡಿದ್ದಾರೆ. ಹೀಗಾಗಿ ಒಂದು ವೇಳೆ ನತಾಶಾಗೆ ವಿಚ್ಛೇದನ ನೀಡಿದರೂ ಹಾರ್ದಿಕ್ ನಯಾ ಪೈಸೆ ನತಾಶಾಗೆ ನೀಡಬೇಕಾಗಿಲ್ಲ ಎಂದು ವರದಿಗಳಾಗುತ್ತಿವೆ.
ಇದನ್ನಿಟ್ಟುಕೊಂಡು ಟ್ರೋಲ್ ಪೇಜ್ ಗಳು ಸಖತ್ ಆಕ್ಟಿವ್ ಆಗಿವೆ. ಜೀವನದಲ್ಲಿ ಆಸ್ತಿ ಮಾಡಿದರೆ ಅಮ್ಮನ ಹೆಸರಿಗೆ ಮಾಡಿ, ಸಾಲ ಮಾಡಿದರೆ ಹೆಂಡತಿ ಹೆಸರಿಗೆ ಮಾಡಿ ಎಂದು ಟ್ರೋಲ್ ಪೇಜ್ ಗಳು ಸಖತ್ ಫನ್ನಿಯಾಗಿ ಟ್ರೋಲ್ ಮಾಡಿವೆ.
ಇನ್ನೊಂದಷ್ಟು ಮಂದಿ ಇಂತಹ ಪರಿಸ್ಥಿತಿ ಬಂದರೆ ಎಂದು ಮೊದಲೇ ಲೆಕ್ಕಾಚಾರ ಹಾಕಿ ತಮ್ಮೆಲ್ಲಾ ಆಸ್ತಿಯನ್ನು ಅಮ್ಮನ ಹೆಸರಿಗೆ ಮಾಡಿರುವ ಹಾರ್ದಿಕ್ ರದ್ದು ಪಕ್ಕಾ ಮಾರ್ವಾಡಿ ಲೆಕ್ಕಾಚಾರದ, ಚಾಲಾಕಿ ಮೈಂಡ್ ಎಂದು ಹೊಗಳಿದ್ದಾರೆ. ಇಬ್ಬರ ನಡುವೆ ವಿರಸವಿದೆಯೋ ಗೊತ್ತಿಲ್ಲ, ಆದರೆ ಇವರನ್ನಿಟ್ಟುಕೊಂಡು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಫನ್ನಿ ಟ್ರೋಲ್ ಗಳಾಗುತ್ತಿವೆ.