ಐಪಿಎಲ್ 2022: ಇಂದಿನಿಂದ ಪ್ಲೇ ಆಫ್ ಹಂತ ಶುರು

ಮಂಗಳವಾರ, 24 ಮೇ 2022 (08:50 IST)
ಮುಂಬೈ: ಐಪಿಎಲ್ 2022 ರಲ್ಲಿ ಇಂದಿನಿಂದ ಪ್ಲೇ ಆಫ್ ಹಂತದ ಪಂದ್ಯಗಳು ಆರಂಭವಾಗುತ್ತಿದೆ. ಮೊದಲ ಪಂದ್ಯದಲ್ಲಿ ಗುಜರಾತ್ ಮತ್ತು ರಾಜಸ್ಥಾನ್ ತಂಡಗಳು ಮುಖಾಮುಖಿಯಾಗಲಿವೆ.

ಲೀಗ್ ಪಂದ್ಯಗಳ ಪ್ರದರ್ಶನ ಆಧರಿಸಿ ಹೇಳುವುದಾದರೆ ಗುಜರಾತ್ ಟೈಟನ್ಸ್ ಬಲಿಷ್ಠವಾಗಿದೆ. ನಾಯಕ ಹಾರ್ದಿಕ್ ಪಾಂಡ್ಯ, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್ ಇದುವರೆಗೆ ಉತ್ತಮ ಪ್ರದರ್ಶನವನ್ನೇ ನೀಡುತ್ತಾ ಬಂದಿದ್ದಾರೆ. ಅಲ್ಲದೆ ರಾಹುಲ್ ತೆವಾತಿಯಾ ಕೂಡಾ ಫಿನಿಶರ್ ರೋಲ್ ಚೆನ್ನಾಗಿ ನಿಭಾಯಿಸುತ್ತಿದ್ದಾರೆ. ಬೌಲಿಂಗ್ ನಲ್ಲೂ ರಶೀದ್ ಖಾನ್, ಮೊಹಮ್ಮದ್ ಶಮಿ ರ ಬೌಲಿಂಗ್ ಪಡೆ ಬಲಿಷ್ಠವಾಗಿದೆ.

ಇನ್ನು, ರಾಜಸ್ಥಾನ್ ರಾಯಲ್ಸ್ ಲೀಗ್ ಹಂತದಲ್ಲಿ ನೀಡಿದ ಪ್ರದರ್ಶನ ಮುಂದುವರಿಸಿದರೆ ಇಲ್ಲೂ ಯಶಸ್ಸು ಕಾಣಬಹುದು. ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್, ದೇವದತ್ತ್ ಪಡಿಕ್ಕಲ್, ಹೆಟ್ಮೈರ್, ಯಶಸ್ವಿ ಜೈಸ್ವಾಲ್ ರಂತಹ ಬ್ಯಾಟಿಗರನ್ನು ಹೊಂದಿರುವ ರಾಜಸ್ಥಾನ್ ಗೆ ಬೌಲಿಂಗ್ ಹೆಚ್ಚು ಶಕ್ತಿ ನೀಡುತ್ತದೆ. ಯಜುವೇಂದ್ರ ಚಾಹಲ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ ಕೃಷ್ಣ, ಕುಲದೀಪ್ ಯಾದವ್ ಇದುವರೆಗೆ ಮಿಂಚಿದ್ದಾರೆ. ಇದೇ ಪ್ರದರ್ಶನ ಕಾಯ್ದುಕೊಂಡರೆ ಇಂದು ಜಿದ್ದಾಜಿದ್ದಿನ ಪಂದ್ಯ ನೋಡಬಹುದು. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ