ನಾಯಕ ಕೊಹ್ಲಿಗೂ ಮೊದಲೇ ಗುಟ್ಟು ಬಿಟ್ಟುಕೊಟ್ಟ ರಿಷಬ್ ಪಂತ್
ಈ ಪಂದ್ಯದ ಮೂಲಕ ರಿಷಬ್ ಪಂತ್ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡುವ ಸೂಚನೆಯನ್ನು ಟ್ವಿಟರ್ ಮೂಲಕ ನೀಡಿದ್ದಾರೆ. ಕೊಹ್ಲಿ ಅಂತಿಮ ಬಳಗವನ್ನು ಅನೌನ್ಸ್ ಮಾಡುವ ಮೊದಲೇ ರಿಷಬ್ ರಹಸ್ಯ ಬಿಟ್ಟುಕೊಟ್ಟಿದ್ದಾರೆ.
‘ಯಾವತ್ತೂ ಮೈದಾನದಲ್ಲಿ ಶೇ.100 ರಷ್ಟು ಕೊಡುಗೆ ನೀಡಲು ರೆಡಿಯಾಗಿರುತ್ತಿದ್ದೆ. ವೆಸ್ಟ್ ಇಂಡೀಸ್ ನ್ನು ಮೊದಲ ಏಕದಿನದಲ್ಲಿ ಎದುರಿಸಲು ಕಾತುರನನಾಗಿದ್ದೇನೆ’ ಎಂದು ರಿಷಬ್ ಟ್ವೀಟ್ ಮಾಡಿರುವುದು ಅವರು ಇಂದಿನ ಪಂದ್ಯದಲ್ಲಿ ಆಡುವ ಸುದ್ದಿಯನ್ನು ಖಚಿತಪಡಿಸಿದೆ.