ವೆಸ್ಟ್ ಇಂಡೀಸ್ ಏಕದಿನ ಸರಣಿಯಲ್ಲಿ ಇತಿಹಾಸ ಸೃಷ್ಟಿಸಲಿರುವ ಟೀಂ ಇಂಡಿಯಾ
ಭಾರತ-ವಿಂಡೀಸ್ ನಡುವೆ ಇದು 19 ನೇ ಸರಣಿಯಾಗಲಿದ್ದು, ಭಾರತ ಇದುವರೆಗೆ 948 ಏಕದಿನ ಪಂದ್ಯಗಳನ್ನಾಡಿದೆ. ಅಂದರೆ ವಿಶ್ವದಲ್ಲೇ ಅತ್ಯಧಿಕ ಏಕದಿನ ಪಂದ್ಯಗಳಾಡಿದ ದಾಖಲೆ ಭಾರತದ ಹೆಸರಿನಲ್ಲಿದೆ.
ಈ ಸರಣಿಯಲ್ಲಿ ಭಾರತ 950 ನೇ ಪಂದ್ಯವಾಡಲಿದ್ದು, ಈ ಮೂಲಕ ಇಂತಹ ದಾಖಲೆ ಮಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. 916 ಪಂದ್ಯಗಳನ್ನಾಡಿರುವ ಆಸ್ಟ್ರೇಲಿಯಾ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಅದೇನೇ ಇದ್ದರೂ 950 ಪಂದ್ಯವಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆ ಶಾಶ್ವತವಾಗಿ ಟೀಂ ಇಂಡಿಯಾ ಹೆಸರಿಗೆ ಬರಲಿದೆ.