ರೋಡ್ ಸೇಫ್ಟೀ ಟೂರ್ನಮೆಂಟ್: ಇಂದು ಸಚಿನ್ ವರ್ಸಸ್ ಲಾರಾ ಮ್ಯಾಚ್
ಇಂದಿನ ಪಂದ್ಯದಲ್ಲಿ ಸಚಿನ್ ನೇತೃತ್ವದ ಭಾರತದ ದಿಗ್ಗಜ ಕ್ರಿಕೆಟಿಗರ ತಂಡ ಮತ್ತು ವೆಸ್ಟ್ ಇಂಡೀಸ್ ದಿಗ್ಗಜರ ತಂಡ ಪರಸ್ಪರ ಸೆಣಸಾಡಲಿದೆ. ಕಾನ್ಪುರದಲ್ಲಿ ಈ ಪಂದ್ಯ ಸಂಜೆ 7.30 ಕ್ಕೆ ಟಿ20 ಮಾದರಿಯಲ್ಲಿ ಪಂದ್ಯ ನಡೆಯಲಿದೆ.
ವಿಶೇಷವೆಂದರೆ ಇಂದಿನ ಪಂದ್ಯದಲ್ಲಿ ಸಚಿನ್ ಜೊತೆಗೆ ವೀರೇಂದ್ರ ಸೆಹ್ವಾಗ್ ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಪ್ರೇಕ್ಷಕರಿಗೆ ಇಂದು ಹಬ್ಬವಾಗಲಿದೆ. ಮೊದಲ ಪಂದ್ಯದಲ್ಲಿ ಭಾರತ ತಂಡ ದ.ಆಫ್ರಿಕಾ ವಿರುದ್ಧ ಗೆಲುವು ಸಾಧಿಸಿತ್ತು.