ವಿರಾಟ್ ಕೊಹ್ಲಿ ಈಗಲೇ ನಿವೃತ್ತಿಯಾಗಬೇಕು ಎಂದ ಶಾಹಿದ್ ಅಫ್ರಿದಿ ಟ್ರೋಲ್

ಬುಧವಾರ, 14 ಸೆಪ್ಟಂಬರ್ 2022 (10:11 IST)
ಮುಂಬೈ: ಟೀಂ ಇಂಡಿಯಾ ರನ್ ಮೆಷಿನ್ ವಿರಾಟ್ ಕೊಹ್ಲಿ ಈಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತರಾಗುವುದು ಉತ್ತಮ ಎಂದಿದ್ದ ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಟ್ರೋಲ್ ಆಗಿದ್ದಾರೆ.

ಕೊಹ್ಲಿ ಈಗಷ್ಟೇ ಫಾರ್ಮ್ ಗೆ ಬಂದಿದ್ದಾರೆ. ಉತ್ತಮ ಲಯದಲ್ಲಿರುವಾಗಲೇ ನಿವೃತ್ತರಾಗುವುದು ಉತ್ತಮ ಎಂದು ಅಫ್ರಿದಿ ಹೇಳಿದ್ದರು. ಅವರ ಹೇಳಿಕೆಗೆ ಮಾಜಿ ಕ್ರಿಕೆಟಿಗ ಅಮಿತ್ ಮಿಶ್ರಾ ‘ಅಫ್ರಿದಿ ಅವರೇ ಕೆಲವರು ಒಮ್ಮೆ ಮಾತ್ರ ನಿವೃತ್ತರಾಗುತ್ತಾರೆ. ಹೀಗಾಗಿ ಕೊಹ್ಲಿಯನ್ನು ಅವರ ಪಾಡಿಗೆ ಬಿಟ್ಟುಬಿಡಿ’ ಎಂದಿದ್ದಾರೆ.

ಅಫ್ರಿದಿ ಒಮ್ಮೆ ನಿವೃತ್ತಿ ಘೋಷಿಸಿ ಮತ್ತೆ ಕ್ರಿಕೆಟ್ ಗೆ ಮರಳಿದ್ದರು. ಹೀಗಾಗಿ ಇದೇ ವಿಚಾರವನ್ನಿಟ್ಟುಕೊಂಡು ಅವರನ್ನು ಟ್ರೋಲ್ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ